ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ (Rain) ದಿನದಿಂದ ದಿನಕ್ಕೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ ಗ್ರಾಮದ ಹಾಲಸಿದ್ಧನಾಥ ದೇವರ ಜಾತ್ರೆ ಹಿನ್ನೆಲೆಯಲ್ಲಿ ಹಳ್ಳವನ್ನು ಲೆಕ್ಕಿಸದೆ ಹಳ್ಳ ದಾಟಿ ಪಲ್ಲಕ್ಕಿ ತೆಗೆದುಕೊಂಡು ಭಕ್ತರು (Devotees) ಸಾಗಿದ್ದಾರೆ.
Advertisement
ಜಿಲ್ಲೆಯಲ್ಲಿ ಉಂಟಾದ ಅಕಾಲಿಕ ಮಳೆಯಿಂದ ಜನ ರೋಸಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಕಾಲಿಕ ಮಳೆಯಿಂದ ಬೆಳಗಾವಿ ಜಿಲ್ಲೆಯ ಬಹುತೇಕ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವ ಪರಿಣಾಮ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ ಗ್ರಾಮದ ಹಾಲಸಿದ್ಧನಾಥ ದೇವರ ಜಾತ್ರೆಯಲ್ಲಿ ಹಳ್ಳವನ್ನು ಲೆಕ್ಕಿಸದೆ ಕುರಲಿ ಗ್ರಾಮದಿಂದ ಅಪ್ಪಾಚಿವಾಡಿ ಗ್ರಾಮಕ್ಕೆ ಹಳ್ಳ ದಾಟಿ ಪಲ್ಲಕ್ಕಿ ಹೊತ್ತು ಭಕ್ತರು ಸಾಗಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ವಂಚನೆಗೆ ಒಳಗಾಗಿ 16 ಲಕ್ಷ ಕಳೆದುಕೊಂಡಿದ್ರು ಬಿ.ವೈ ರಾಘವೇಂದ್ರ!
Advertisement
Advertisement
ಸೊಂಟದವರೆಗೆ ಇರುವ ನೀರಿನಲ್ಲೇ ಪಲ್ಲಕ್ಕಿ ಹೊತ್ತು ನಡೆದ ಸಾವಿರಾರು ಭಕ್ತರು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ನಿಪ್ಪಾಣಿ ತಾಲೂಕಿನ ಪಡಲಿಹಾಳ ಗ್ರಾಮದ ಹಳ್ಳದ ನೀರು ಊರಿಗೆ ನುಗ್ಗಿ ಊರಿನ ಬೀದಿಗಳೂ ಹಳ್ಳವಾಗಿ ಪರಿಣಮಿಸಿದ್ದವು. ಪಡಲಿಹಾಳ ಗ್ರಾಮದಲ್ಲಿ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಸಂಜೆ ಹೊತ್ತಿಗೆ ಸುರಿದ ಭಾರೀ ಮಳೆಯಿಂದ ನೀರು ಊರಿಗೆ ನುಗ್ಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ. ಮಹಾರಾಷ್ಟ್ರದ ಕೊಲ್ಲಾಪುರ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ನಗರ ಸುಪ್ರಸಿದ್ಧ ಗಾಂಧಿ ಮಾರುಕಟ್ಟೆ ರಸ್ತೆ ಜಲಾವೃತವಾಗಿತ್ತು. ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದ ಬಟ್ಟೆ ವ್ಯಾಪಾರಕ್ಕೆ ಪ್ರಸಿದ್ಧವಾಗಿರುವ ಗಾಂಧಿ ನಗರ ಮಾರುಕಟ್ಟೆ ಜಲಾವೃತವಾದ ಪರಿಣಾಮ ಸಾರ್ವಜನಿಕರು ಪರದಾಡಿದರು. ಇದನ್ನೂ ಓದಿ: 2 ಗಂಟೆ ಆತ್ಮಹತ್ಯೆ ಹೈಡ್ರಾಮಾ – ಸಿನಿಮಾ ರೀತಿಯಲ್ಲಿ ದಂಪತಿಯ ರಕ್ಷಣೆ