ಬಾಗಲಕೋಟೆ: ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಬಾಗಲಕೋಟೆ ನಗರದಲ್ಲಿ ಏಕಾಏಕಿ ಅಂಗಡಿ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಮೂರು ಬೈಕ್ ನಜ್ಜುಗುಜ್ಜಾಗಿದೆ.
Advertisement
ಬಾಗಲಕೋಟೆ ನಗರದ ಎಂ.ಜಿ.ರಸ್ತೆಯಲ್ಲಿ ಅಂಗಡಿಯ ಮೇಲ್ಛಾವಣಿ ಕುಸಿದು ಬೈಕ್ ಜಖಂ ಆಗಿವೆ. ಅದೃಷ್ಠವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಸುಮಾರು ಎರಡು ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆಯಿಂದ ಮಣ್ಣಿನ ಮೇಲ್ಛಾವಣಿ ನೆನೆದಿದ್ದು, ಅಂಗಡಿ ಮಳಿಗೆಯ ಗೋಡೆಗಳು ಕಳಚಿ ಬೀಳುತ್ತಿವೆ. ಮೊದಲೇ ಅಂತಸ್ತಿನ ಗೋಡೆ ಕುಸಿದು ಬಿದ್ದ ಪರಿಣಾಮ ಮೂರು ಬೈಕ್‍ಗಳು ಜಖಂ ಆಗಿವೆ. ಇದನ್ನೂ ಓದಿ: ರಾಖಿ ಕಟ್ಟಲು ಅಣ್ಣನ ಮನೆಗೆ ಬಂದರು -ಸಹೋದರನ ಜೀವವಿಲ್ಲದ ಕೈಗೆ ರಾಖಿ ಕಟ್ಟುವಂತಾಯ್ತು
Advertisement
Advertisement
ಹೆಸ್ಕಾಂ ಇಲಾಖೆಯ ಸಿಬ್ಬಂದಿ ವಿದ್ಯುತ್ ಕಂಬದಲ್ಲಿ ದುರಸ್ತಿಗೆ ತೆರಳಿದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳೀಯ ವ್ಯಾಪಾರಸ್ಥರಾದ ಶರಣಬಸಪ್ಪ ಜಿಗಜಿನ್ನಿ ಎನ್ನುವವರಿಗೆ ಸೇರಿದ ಅಂಗಡಿ ಕುಸಿದು ಬಿದ್ದಿದೆ. ಸ್ಥಳಕ್ಕೆ ಬಾಗಲಕೋಟೆ ನಗರ ಪೊಲೀಸರು ದೌಡಾಯಿಸಿದ್ದಾರೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ಅಮೀನಗಡ ಪಟ್ಟಣದಲ್ಲಿ ಬೆಳಗಾವಿ ರಾಯಚೂರು ರಾಜ್ಯ ಹೆದ್ದಾರಿ ಮೇಲೆ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು.