ಬೆಂಗಳೂರು: ಗ್ರಹಣದಿಂದಾಗಿ ಜಲಕಂಟಕ, ರಾಜಕೀಯವಾಗಿ ಸಾಕಷ್ಟು ಪರಿಣಾಮಗಳು ಬೀರಲಿವೆ ಎಂದು ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ (Somasundar Dixit) ಹೇಳಿದ್ದಾರೆ.
ಚಂದ್ರಗ್ರಹಣದ (Chandra Grahan) ಪರಿಣಾಮಗಳ ಕುರಿತು ಮಾತನಾಡಿದ ಅವರು, ಚಂದ್ರಗ್ರಹಣ ಸಂಪೂರ್ಣ ವಿಶೇಷ. ಇದು ರಕ್ತ ಚಂದ್ರಗ್ರಹಣವಲ್ಲ, ತಾಮ್ರ ಚಂದ್ರಗ್ರಹಣ. ಭಾದ್ರಪದ ಮಾಸದ ಪೌರ್ಣಮೆಯ ಚಂದ್ರಗ್ರಹಣ ವಿಶೇಷವಾಗಿದೆ. ಗ್ರಹಣ ಹಿನ್ನೆಲೆ ಇಂದು ಶಿವನಿಗೆ ಕ್ಷೀರ ನೈವೇದ್ಯ ಅರ್ಪಿಸಲಾಗುತ್ತದೆ. ಮಹಾಮಂಗಳಾರತಿ ಬಳಿಕ ದೇವಸ್ಥಾನ ದರ್ಬಾ ಬಂಧನದಿಂದ ಕ್ಲೋಸ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಗ್ರಸ್ತ ರಕ್ತಚಂದ್ರಗ್ರಹಣ – ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್
ಗ್ರಹಣದಿಂದ ವಿಮುಕ್ತಿ ಬಳಿಕ ಶಿವನಿಗೆ ವಿಶೇಷ ಅಭಿಷೇಕ, ಪೂಜೆ ಇರುತ್ತದೆ. ಈ ವರ್ಷದ ಚಂದ್ರಗ್ರಹಣ ಕುಂಭ ರಾಶಿ ಮೇಲೆ ಪರಿಣಾಮ ಬೀರಲಿದೆ. ಈ ಬಾರಿ ಜಲಕಂಟಕ ಇದೆ, ರಾಜಕೀಯವಾಗಿ ಎಫೆಕ್ಟ್ ಆಗಲಿದೆ. ಗ್ರಹಣದಿಂದ ಮತ್ತಷ್ಟು ಜಲಕಂಟಕ ಹೆಚ್ಚಾಗುವ ಸಂಭವ ಇದೆ. ನದಿಗಳು, ಕೆರೆಗಳು ಉಕ್ಕಿ ಹರಿದು ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗವಿಗಂಗಾಧರೇಶ್ವರನಿಗೆ ಪಂಚಾಮೃತ ಪೂಜೆ, ಕ್ಷೀರಾಭಿಷೇಕ ಆರಂಭವಾಗಿದೆ. ಹಾಲು, ಮೊಸರು, ಹೂವಿನ ಅಭಿಷೇಕ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಕ್ಷೀರ ನೈವೇದ್ಯ ಸಮರ್ಪಣೆ ಆಗಿದೆ. ಇದನ್ನೂ ಓದಿ: ಇಂದು ವರ್ಷದ ಕೊನೆಯ ಗ್ರಹಣ; ಮಧ್ಯಾಹ್ನವೇ ದೇವಾಲಯಗಳು ಬಂದ್ – ವಿಶೇಷ ಪೂಜೆ, ಪುನಸ್ಕಾರ