ಚೆನ್ನೈ: ಇಲ್ಲಿನ (Chennai) ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಮೊದಲ ಹೈಡ್ರೋಜನ್ ಚಾಲಿತ ಕೋಚ್‍ಅನ್ನು (Hydrogen Coach) ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತವು ಪ್ರಸ್ತುತ 1,200 ಹೆಚ್‌ಪಿ ಹೈಡ್ರೋಜನ್ ಚಾಲಿತ ರೈಲನ್ನು (Hydrogen Powered Train) ಅಭಿವೃದ್ಧಿಪಡಿಸುತ್ತಿದೆ. ಇದು ದೇಶವನ್ನು ಹೈಡ್ರೋಜನ್ ರೈಲು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನ ಪಡೆಯುವ ಹೆಜ್ಜೆಯಾಗಿದೆ. ಇದು ರೈಲು ಸಾರಿಗೆಗೆ ಹೈಡ್ರೋಜನ್ ಬಳಕೆಯ ರಾಷ್ಟ್ರಗಳ ಪಟ್ಟಿಗೆ ಭಾರತದ ಪ್ರವೇಶವನ್ನು ಸೂಚಿಸುತ್ತದೆ.
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಮೊದಲ ಹೈಡ್ರೋಜನ್ ಚಾಲಿತ ಕೋಚ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ಭಾರತ 1,200 ಹೆಚ್.ಪಿ. ಸಾಮರ್ಥ್ಯದ ಹೈಡ್ರೋಜನ್ ರೈಲನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನದಲ್ಲಿ ಭಾರತವನ್ನು ನಾಯಕ ಸ್ಥಾನದಲ್ಲಿರಿಸುತ್ತದೆ.@RailMinIndia @VSOMANNA_BJP
— PIB in Karnataka (@PIBBengaluru) July 25, 2025
ಡ್ರೈವಿಂಗ್ ಪವರ್ ಕಾರ್ ಎಂದು ಕರೆಯಲ್ಪಡುವ ಈ ಪರೀಕ್ಷಿತ ಕೋಚ್, ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ರೈಲ್ವೇ ಸಂಚಾರ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಇದು ಹಸಿರು ಇಂಧನ ಮತ್ತು ಭವಿಷ್ಯದ ಸಾರಿಗೆಗೆ ಪರಿಹಾರ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.
ಪ್ರತಿ ರೈಲಿಗೆ 80 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹೈಡ್ರೋಜನ್ ರೈಲುಗಳ ಆರಂಭಿಕ ಚಾಲನಾ ವೆಚ್ಚ ಹೆಚ್ಚಿರಬಹುದು, ಆದರೆ ಕಾಲಾನಂತರದಲ್ಲಿ ಅದು ಕಡಿಮೆಯಾಗುವ ನಿರೀಕ್ಷೆಯಿದೆ. ಭಾರತದ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯನ್ನು ಸಾಧಿಸಲು ಈ ಯೋಜನೆ ಸಹಕಾರಿಯಾಗಲಿದೆ.
ಅಶ್ವಿನಿ ವೈಷ್ಣವ್ ʻಹೈಡ್ರೋಜನ್ ಫಾರ್ ಹೆರಿಟೇಜ್ʼಉಪಕ್ರಮದಡಿಯಲ್ಲಿ ಭಾರತೀಯ ರೈಲ್ವೆ 35 ಹೈಡ್ರೋಜನ್ ಚಾಲಿತ ರೈಲುಗಳನ್ನು ಓಡಿಸಲು ಯೋಜಿಸಿದೆ ಎಂದು 2023 ರಲ್ಲಿ ರಾಜ್ಯಸಭೆಯಲ್ಲಿ ಹೇಳಿದ್ದರು.