ಮುಂಬೈ: ದೇಶದಲ್ಲೇ ಮೊದಲ ಬಾರಿಗೆ ರೈಲಿನಲ್ಲಿ ಸ್ಥಾಪಿಸಲಾದ ಎಟಿಎಂನ (ATM) ಪ್ರಾಯೋಗಿಕ ಪರೀಕ್ಷೆ ಮಂಗಳವಾರ ಯಶಸ್ವಿಯಾಗಿ ನಡೆದಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ (Bank Of Maharashtra) ಸಹಯೋಗದೊಂದಿಗೆ ಮನ್ಮಾಡ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ವರೆಗೆ (Chhatrapati Shivaji Maharaj Terminus) ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ (Panchavati Express) ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಈ ಪ್ರಾಯೋಗಿಕ ಪರೀಕ್ಷೆಯ ಬಳಿಕ ಈಶಾನ್ಯ ಗಡಿನಾಡು ರೈಲ್ವೆಗಳಲ್ಲಿ ಎಟಿಎಂಗಳನ್ನು ಪರಿಚಯಿಸಲು ನಿರ್ಧರಿಸಿದೆ. ನಾಸಿಕ್‌ನ ಮನ್ಮಾಡ್ ಮತ್ತು ಮುಂಬೈ ನಡುವೆ ಸಂಚರಿಸುವ ಪಂಚವಟಿ ಎಕ್ಸ್ಪ್ರೆಸ್ನ ಎಸಿ ಕೋಚ್‌ನಲ್ಲಿ (AC Coach) ಎಟಿಎಂ ಸ್ಥಾಪಿಸಲಾಗಿದೆ.
ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಾಯೋಗಿಕ ಪರೀಕ್ಷೆ ವೇಳೆ ಇಗತ್ಪುರಿ ಮತ್ತು ಕಸರಾ ಪ್ರದೇಶದಲ್ಲಿ ಸಿಗುವ ಕಡಿಮೆ ನೆಟ್‌ವರ್ಕ್ ಹೊರತುಪಡಿಸಿ, ಯಾವುದೇ ಅಡಚಣೆಯಿಲ್ಲದೇ ಎಟಿಎಂ ಕಾರ್ಯನಿರ್ವಹಿಸಲಿದೆ. ಸುಗಮವಾಗಿ ಸಂಚರಿಸಿದೆ. ನವೀನ ಮತ್ತು ಶುಲ್ಕ ರಹಿತ ಆದಾಯ ಕಲ್ಪನೆಗಳ ಯೋಜನೆ ಅಡಿಯಲ್ಲಿ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ಪಾಲುದಾರಿಕೆಯಲ್ಲಿ ಈ ಎಟಿಎಂ ಅನ್ನು ಪರಿಚಯಿಸಲಾಗಿದೆ.ಇದನ್ನೂ ಓದಿ: 5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ಅಡ್ಮಿಷನ್: ಮಧು ಬಂಗಾರಪ್ಪ
ಈ ಕುರಿತು ಭೂಸಾವಲ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಇತಿ ಪಾಂಡೆ ಮಾತನಾಡಿ, ಭೂಸಾವಲ್ ವಿಭಾಗವು ಆಯೋಜಿಸಿದ್ದ ನವೀನ ಮತ್ತು ಶುಲ್ಕ ರಹಿತ ಆದಾಯ ಕಲ್ಪನೆಗಳ ಯೋಜನಾ ಸಭೆಯಲ್ಲಿ ರೈಲುಗಳಲ್ಲಿ ಎಟಿಎಂ ಸ್ಥಾಪಿಸುವ ಕುರಿತು ಮಂಡಿಸಲಾಯಿತು. ಬಳಿಕ ಈ ಕುರಿತು ಚರ್ಚೆ ನಡೆಸಲಾಗಿದೆ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಉತ್ತಮವಾಗಿದ್ದು, ಜನರು ಚಲಿಸುವ ರೈಲಿನಲ್ಲಿ ಎಟಿಎಂ ಮೂಲಕ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಸದ್ಯ ಪಂಚವಟಿ ಎಕ್ಸ್ಪ್ರೆಸ್ನ ಎಸಿ ಕೋಚ್‌ನಲ್ಲಿ ಎಟಿಎಂ ಅಳವಡಿಸಲಾಗಿದ್ದು, ರೈಲಿನ ಎಲ್ಲಾ 22 ಬೋಗಿಗಳಲ್ಲಿರುವ ಪ್ರಯಾಣಿಕರು ಎಸಿ ಕೋಚ್‌ಗೆ ಬಂದು ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಬಹುದು.
In a first-of-its-kind initiative #𝐀𝐓𝐌 𝐢𝐧𝐬𝐭𝐚𝐥𝐥𝐞𝐝 𝐢𝐧 𝐀𝐂 𝐜𝐨𝐚𝐜𝐡 𝐨𝐟 𝐏𝐚𝐧𝐜𝐡𝐯𝐚𝐭𝐢 𝐄𝐱𝐩𝐫𝐞𝐬𝐬 #Mumbai #Manmad are interconnected & ATM put up in pantry space can be used by all, Central Railway said #IndianRailways pic.twitter.com/f5ggU3NeXc
— sudhakar (@naidusudhakar) April 16, 2025
ಮುಂಬೈ-ಹಿಂಗೋಲಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಪಂಚವಟಿ ಎಕ್ಸ್‌ಪ್ರೆಸ್‌ನೊಂದಿಗೆ ತನ್ನ ರೇಕ್ ಅನ್ನು ಹಂಚಿಕೊಳ್ಳುವುದರಿಂದ, ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರಿಗೂ ಈ ಎಟಿಎಂ ಲಭ್ಯವಿರುತ್ತದೆ. ಹೀಗಾಗಿ ಮುಂಬೈ-ಹಿಂಗೋಲಿ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರೂ ಕೂಡ ಎಟಿಎಂನ ಲಾಭ ಪಡೆದುಕೊಳ್ಳಬಹುದು ಎಂದಿದ್ದಾರೆ.
ಪ್ರಯಾಣಿಕ ಸಂಜಯ್ ಎಂಬುವವರು ಮಾತನಾಡಿ, ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವುದರ ಜೊತೆಗೆ ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್, ಚೆಕ್ ಬುಕ್ ಆರ್ಡರ್ ಮಾಡಬಹುದಾಗಿದೆ ಎಂದು ತಿಳಿಸಿದರು.
ರೈಲ್ವೆ ಅಧಿಕಾರಿಯೊಬ್ಬರು ಮಾತನಾಡಿ, ಈ ಸೇವೆ ಜನಪ್ರಿಯವಾದರೆ ಹೆಚ್ಚಿನ ರೈಲುಗಳಲ್ಲಿ ಎಟಿಎಂ ಸ್ಥಾಪಿಸಲಾಗುವುದು ಮತ್ತು ಭದ್ರತೆಗಾಗಿ ಎಟಿಎಂ ಶಟರ್ ವ್ಯವಸ್ಥೆಯನ್ನು ಹೊಂದಿದ್ದು, 24/7 ಸಿಸಿಟಿವಿ ಕಣ್ಗಾವಲು ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಲಕ್ನೋ ಸೂಪರ್ ಜೈಂಟ್ಸ್‌ಗೆ ಬಿಗ್ ಬೂಸ್ಟ್ – ರಾಕೆಟ್ ವೇಗಿ ಮಯಾಂಕ್ ಯಾದವ್ ಕಂಬ್ಯಾಕ್