ವಾಷಿಂಗ್ಟನ್: ರೈಲ್ವೆ ಅಪಘಾತದಿಂದ ಓರ್ವ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಮೊಂಟಾನಾದಲ್ಲಿ ಶನಿವಾರ ನಡೆದಿದೆ. ಇದನ್ನೂ ಓದಿ: ದ್ವೇಷದ ವಿಷವನ್ನು ಬಿತ್ತಿರುವಾಗ ಅಮೃತ ಮಹೋತ್ಸವಕ್ಕೆ ಅರ್ಥವಿದೆಯೇ?: ರಾಹುಲ್
ಸದ್ಯ ಸ್ಥಳೀಯ ಅಧಿಕಾರಿಗಳೊಂದಿಗೆ ರೈಲು ನಿರ್ವಾಹಕ ಅಮ್ಟ್ರಾಕ್ ಗಾಯಗೊಂಡ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ರೈಲಿನಲ್ಲಿ ಸುಮಾರು 147 ಮಂದಿ ಪ್ರಯಾಣಿಕರು ಹಾಗೂ 13 ಸಿಬ್ಬಂದಿ ಇದ್ದರು ಎನ್ನಲಾಗುತ್ತಿದೆ.
ಉತ್ತರ ಮೊಂಟಾನಾದ ಜೋಪ್ಲಿನ್ ಬಳಿ ಸಂಜೆ 4 ಗಂಟೆಗೆ ರೈಲು ಹಳಿ ತಪ್ಪಿದ್ದು, ಘಟನೆ ಕುರಿತ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಘಟನಾ ಸ್ಥಳದಲ್ಲಿ ಲಗೇಜ್‍ಗಳು ಚೆಲ್ಲಾಪಿಲ್ಲಿಯಾಗಿದೆ ಮತ್ತು ಹಲವಾರು ರೈಲಿನ ಬೋಗಿಗಳು ಹಳಿಯಿಂದ ಪಕ್ಕಕ್ಕೆ ಸರಿದಿರುವುದನ್ನು ನೋಡಬಹುದಾಗಿದೆ.
Several dead as Amtrak train derails in US state of Montana – https://t.co/o1BwKxeCJm pic.twitter.com/1Wd4nMjCrn
— Mᴇɢᴀᴍɪxᴇʀ ???????? (@djokaymegamixer) September 26, 2021
ಘಟನೆಯಲ್ಲಿ ಮೂರಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಮೊಂಟಾನಾದ ವಿಪತ್ತು ಮತ್ತು ತುರ್ತು ಸೇವೆಗಳ ಸಂಯೋಜಕರು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್