ಹಾಸನ: ಸತತವಾಗಿ ಸುರಿದ ಮಹಾಮಳೆ ಅನಾಹುತಗಳ ಸರಮಾಲೆಯನ್ನೇ ಸೃಷ್ಟಿಸಿದ್ದು, ಇದೀಗ ಬೆಂಗಳೂರು- ಮಂಗಳೂರು ರೈಲು ಮಾರ್ಗವನ್ನು ಸರಿಪಡಿಸಲು ರೈಲ್ವೆ ಸಿಬ್ಬಂದಿ ಪರದಾಡುವಂತಾಗಿದೆ.
ಭಾರೀ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲ್ವೆ ಮಾರ್ಗದಲ್ಲಿ ಭಾರೀ ಪ್ರಮಾಣದ ಹಾನಿಗಳಾಗಿವೆ. ಹಲವು ಕಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ರೈಲ್ವೆ ಸೇತುವೆ, ಗುಡ್ಡ ಕುಸಿತ ಪ್ರಕರಣಗಳು ಇನ್ನಷ್ಟು ಹೊರಬರುತ್ತಿವೆ. ಮಳೆ ಕೊಂಚ ಕಡಿಮೆ ಆದ ಬಳಿಕ ಇದೀಗ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನೂ ಓದಿ: ಶಿರಾಡಿಘಾಟ್ ರಸ್ತೆಯೊಂದಿಗೆ ಮಂಗ್ಳೂರು ರೈಲು ಮಾರ್ಗವೂ ಸಂಪೂರ್ಣ ಬಂದ್
ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ಗುಡ್ಡ ಕುಸಿತ ಕಂಡುಬಂದಿದ್ದು, ರೈಲ್ವೆ ಸೇತುವೆಯೇ ಕೊಚ್ಚಿ ಹೋಗಿದೆ. ಎಡಕುಮೇರಿ-ಕಡಗರವಳ್ಳಿ ನಡುವಿನ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ಸದ್ಯ ಈ ಅನಾಹುತಗಳನ್ನ ಸರಿಪಡಿಸಲು ರೈಲ್ವೆ ಸಿಬ್ಬಂದಿ ಪರದಾಡುವಂತಾಗಿದೆ. ಈ ರೀತಿಯ ಗುಡ್ಡ ಕುಸಿತಗಳಿಂದಾಗಿ ಬೆಂಗಳೂರು -ಮಂಗಳೂರು ರೈಲು ಮಾರ್ಗ ಇನ್ನೂ ಅನಿಶ್ಚಿತತೆಯಲ್ಲೇ ಉಳಿದಿದೆ. ಇದನ್ನೂ ಓದಿ: ಬೆಂಗ್ಳೂರು – ಮಂಗ್ಳೂರು ರೈಲ್ವೇ ಹಳಿ 50 ಕಡೆ ಗುಡ್ಡ ಕುಸಿತ – 1 ತಿಂಗ್ಳು ಸಂಚಾರ ಅನುಮಾನ, ಇದನ್ನೂ ಓದಿ: ಸಕಲೇಶಪುರದಲ್ಲಿ ಅಪಾಯಕ್ಕೆ ಸಿಲುಕಿರೋ 16 ರೈಲ್ವೇ ಸಿಬ್ಬಂದಿ ರಕ್ಷಣೆಗೆ ಕಾರ್ಯಾಚರಣೆ ಆರಂಭ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv