ಶಿವಮೊಗ್ಗ: ರೈಲ್ವೆ ಯೋಜನೆಗೆ ತನ್ನ 3 ಎಕರೆ ಜಮೀನು ಕಳೆದುಕೊಂಡ ರೈತ, ಸರ್ಕಾರದಿಂದ ಜಮೀನಿಗೆ ಅಲ್ಪ ಪರಿಹಾರ ಬಂದಿದೆ ಎಂದು ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅರುಣ್ ನಾಯ್ಕ (28) ಮೃತಪಟ್ಟ ರೈತ. ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಯೋಜನೆಗೆ ಸರ್ಕಾರ ರೈತರ ಭೂಮಿ ವಶಪಡಿಸಿಕೊಳ್ಳುತ್ತಿದೆ. ಆದರೆ ತನ್ನ ಬೆಲೆ ಬಾಳುವ ಫಲವತ್ತಾದ ಜಮೀನಿಗೆ ಸರ್ಕಾರ ಕಡಿಮೆ ಪರಿಹಾರ ನಿಗದಿಪಡಿಸಿದೆ. ಹೀಗೆ ಈ ವಿಚಾರವಾಗಿ ಮನನೊಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ.
Advertisement
Advertisement
ಮೃತ ಅರುಣ್ ನಾಯ್ಕ ಅವರ ತಂದೆ ತಿಮ್ಮನಾಯ್ಕ ಹೆಸರಿನಲ್ಲಿ ಶಿಕಾರಿಪುರ ತಾಲೂಕಿನ ಎಳೆನೀರು ಕೊಪ್ಪ ಗ್ರಾಮದಲ್ಲಿ ಸರ್ವೇ ನಂಬರ್ 13/13, 14/13ರಲ್ಲಿ ಫಸಲಿಗೆ ಬಂದಿರುವ 3 ಎಕರೆ ಅಡಕೆ ತೋಟ ರೈಲ್ವೆ ಯೋಜನೆಗೆ ಸರ್ಕಾರ ವಶಪಡಿಸಿಕೊಂಡಿದೆ. ಇವರ ಜಮೀನಿಗೆ ಎಕರೆಗೆ 5 ಲಕ್ಷ ಪರಿಹಾರ ಹಣ ನಿಗದಿಪಡಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಇದನ್ನೂ ಓದಿ: ಅನ್ಯ ಜಾತಿಯವನನ್ನು ಮದುವೆಯಾದ ಮಗಳು- ರುಬ್ಬುವ ಕಲ್ಲಿನಿಂದ ಚಚ್ಚಿ ಪತ್ನಿ, ಮಕ್ಕಳನ್ನು ಕೊಂದು ಪ್ರಾಣ ಬಿಟ್ಟ ತಂದೆ
Advertisement
Advertisement
ಆದರೆ ಮೃತ ರೈತ ಕಾಮಗಾರಿ ನಡೆಸುತ್ತಿರುವ ವೇಳೆ ವಿರೋಧ ವ್ಯಕ್ತಪಡಿಸಿದ್ದರು. ಎಕರೆಗೆ 5 ಲಕ್ಷ ರೂ ಪರಿಹಾರ ಎಂದರೆ ಅನ್ಯಾಯವಾಗುತ್ತದೆ. ಪ್ರಸ್ತುತ ಪ್ರತಿ ಎಕರೆ ಜಮೀನಿಗೆ 30 ರಿಂದ 40 ಲಕ್ಷ ರೂ ಇದೆ. ಹೀಗಿರುವಾಗ ಎಕರೆಗೆ ಅಡಕೆ ತೋಟಕ್ಕೆ ಕೇವಲ 5 ಲಕ್ಷ ರೂಪಾಯಿ ಪರಿಹಾರ ಎಂದರೆ ಜೀವನ ಮಣ್ಣು ಸೇರಿದಂತೆ ಎಂದು ಅಧಿಕಾರಿಗಳ ಮುಂದೆ ರೈತರ ತನ್ನ ಅಳಲು ತೋಡಿಕೊಂಡಿದ್ದ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್
ಆದರೆ ಈ ಬಗ್ಗೆ ಅಧಿಕಾರಿಗಳಿಂದ ನಿರೀಕ್ಷಿತ ಉತ್ತರ ದೊರೆಯದ ಕಾರಣ ಮನನೊಂದು ತನ್ನದೇ ಅಡಿಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ