ಬೆಂಗಳೂರು: ಕೊರೊನಾ ಭೀತಿ ರೈಲ್ವೆ ಇಲಾಖೆಗೂ ತಟ್ಟಿದ್ದು, ರೈಲ್ವೆ ಪ್ರಯಾಣಿಕರ ಸಂಖ್ಯೆ ಶೇ. 4ರಷ್ಟು ಕಡಿಮೆ ಆಗಿದೆ. ಅದರಲ್ಲೂ ದೂರದ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಫುಲ್ ಖಾಲಿ ಖಾಲಿ ಆಗಿದೆ. ಇತ್ತ ಓಲಾ, ಊಬರ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ಇಳಿಕೆಯಾಗಿದೆ.
Advertisement
ಈ ಬಗ್ಗೆ ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣಾ ರೆಡ್ಡಿ ಮಾತನಾಡಿ, ಕೊರೊನಾ ಭೀತಿಯಿಂದ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಶೇ. 4ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆ ಜೊತೆಗೆ ರಿಸರ್ವೆಶನ್ ಮಾಡಿದವರು ಟಿಕೆಟ್ ವಾಪಸ್ ಪಡೆಯುತ್ತಿದ್ದಾರೆ. ಕಳೆದ ವರ್ಷ ಶೇ. 20ರಷ್ಟು ಪ್ರಯಾಣಿಕರು ರಿಸರ್ವೆಶನ್ ವಾಪಸ್ ಪಡೆಯುತ್ತಿದ್ದರು. ಈಗ ಕೊರೊನಾ ಎಫೆಕ್ಟ್‍ನಿಂದ ಶೇ. 28ರಷ್ಟು ಮಂದಿ ರಿಸರ್ವೆಶನ್ ರದ್ದು ಮಾಡುತ್ತಿದ್ದಾರೆ. ಗಣನೀಯ ಅಲ್ಲ ಸ್ವಲ್ಪ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿದೆ ಎಂದು ಹೇಳಿದರು.
Advertisement
Advertisement
ಈಗಾಗಲೇ ಮುಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಶೀತ, ಜ್ವರ, ಕೆಮ್ಮು ಈ ರೀತಿ ಲಕ್ಷಣ ಇರುವ ವ್ಯಕ್ತಿ ಕಂಡು ಬಂದರೆ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಅಂತ ಸಿಬ್ಬಂದಿಗೆ ತಿಳಿಸಿದ್ದೇವೆ. ಟಿಕೇಟ್ ವಿತರಿಸುವಾಗ ಸಾರ್ವಜನಿಕರಿಂದ ಹಣ ಪಡೆದ ಮೇಲೆ ಕೈ ಸ್ವಚ್ಛ ಮಾಡುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದ್ದೇವೆ ಎಂದರು.
Advertisement
ನೋಟ್‍ನಿಂದನೂ ಕೂಡ ಕೊರೊನಾ ಬರಬಹುದು ಹೀಗಾಗಿ ಎಚ್ವರಿಕೆ ಕ್ರಮ ವಹಿಸಿದ್ದೇವೆ. ಸದ್ಯ ಕೇರಳ, ದೆಹಲಿ, ಮುಂಬೈ ಕಡೆ ಹೋಗುವವರ ಸಂಖ್ಯೆ ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಇರುತ್ತಾ ಎಂದು ಕಾದು ನೋಡಬೇಕು. ಇದೇ ಪರಿಸ್ಥಿತಿ ಮುಂದುವರಿದರೆ ರೈಲುಗಳ ಸಂಚಾರ ಕಡಿಮೆ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.