ನವದೆಹಲಿ: ಭಾರತದಲ್ಲಿ ಡಿಜಿಟಲ್ (Digital) ಯುಗ ಆರಂಭವಾಗಿ ಸಾಕಷ್ಟು ದಿನಗಳು ಕಳೆದಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಪ್ರತಿಯೊಂದು ಕ್ಷೇತ್ರಕ್ಕೂ ಕಾಲಿಡುವ ಮಟ್ಟಕ್ಕೆ ಬೆಳೆಯುತ್ತಿದೆ. ಮದುವೆ ಹಾಗೂ ಇತರ ಸಮಾರಂಭಗಳಿಗೆ ಭಾರತದಲ್ಲಿ ಡೋಲು ಬಾರಿಸಿ ಸಂಭ್ರಮಿಸುವುದು ಈ ಹಿಂದಿನಿಂದಲು ನಡೆದುಕೊಂಡು ಬರುತ್ತಿದೆ. ಈ ವೇಳೆ ಅವರಿಗೆ ಹಣ ಪಾವತಿಸಲಾಗುತ್ತದೆ. ಇದೀಗ ಡಿಜಿಟಲ್ ಮಾರ್ಪಡಿಗೆ ಸರಿಯಾಗಿ ಹಣದ ಬದಲು ಕ್ಯೂಆರ್ ಕೋಡ್ ಸ್ಕ್ಯಾನರ್ (QR Codes) ಡೋಲಿನಲ್ಲಿ ಅಂಟಿಸಿಕೊಂಡು ಒಬ್ಬ ಡಿಜಿಟಲ್ ಇಂಡಿಯಾಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ.
Advertisement
ಉತ್ತರ ಭಾರತದಲ್ಲಿ ಮದುವೆ ಸಮಾರಂಭಗಳಲ್ಲಿ ಡೋಲು ಬಾರಿಸಲು ಬರುತ್ತಾರೆ ಅವರಿಗೆ ಮದುವೆ ಮುಗಿದ ಮೇಲೆ ಹಣ ಪಾವತಿಸಲಾಗುತ್ತದೆ. ಇಲ್ಲೊಂದು ಮದುವೆಯಲ್ಲಿ ಡೋಲು ಬಾರಿಸುವವ ಹಣವನ್ನು ನಗದು ರೂಪದಲ್ಲಿ ಪಡೆಯದೇ ತನ್ನ ಡೋಲಿನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಅಂಟಿಸಿಕೊಂಡು ಪಡೆಯುತ್ತಿರುವುದು ಗಮನಸೆಳೆದಿದೆ. ಇದನ್ನೂ ಓದಿ: ಭಾರತ ಜಾತ್ಯತೀತ ರಾಷ್ಟ್ರ ಎಂದ ಸುಪ್ರೀಂ – ಠಾಕೂರ್ ಚಂದ್ರರನ್ನು ʼಪರಮಾತ್ಮʼ ಎಂದು ಘೋಷಿಸಲು ಕೋರಿದ್ದ PIL ವಜಾ
Advertisement
Advertisement
ಈ ರೀತಿ ಡೋಲಿನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಅಂಟಿಸಿಕೊಂಡು ಹಣ ಪಡೆಯುತ್ತಿದ್ದ ವೀಡಿಯೋವನ್ನು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnaw) ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಮದುವೆಯಲ್ಲೂ ಡಿಜಿಟಲ್ ಇಂಡಿಯಾ ಕಾಣಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗುಜರಾತ್ ಆಯ್ತು, ಇಂದಿನಿಂದಲೇ ಕರ್ನಾಟಕ ಚುನಾವಣೆಗೆ ತಯಾರಿ
Advertisement
शादी में डिजिटल शगुन????
Digital India का विस्तार। ???????? pic.twitter.com/KFeIn5XUY8
— Ashwini Vaishnaw (@AshwiniVaishnaw) December 3, 2022
ಈಗಾಗಲೇ ದೇಶದಾದ್ಯಂತ ಡಿಜಿಟಲ್ ಕ್ರಾಂತಿ ನಡೆಯುತ್ತಿದ್ದು, ಡಿಜಿಟಲ್ ಇಂಡಿಯಾದ ಭಾಗವಾಗಿ ಪ್ರತಿ ಕ್ಷೇತ್ರದಲ್ಲೂ ಡಿಜಿಟಲ್ ಶಕ್ತಿಯಾಗುತ್ತಿದೆ. ವ್ಯವಹಾರ ಸೇರಿದಂತೆ ಪ್ರತಿಯೊಂದು ಕೆಲಸ ಕಾರ್ಯಗಳು ಡಿಜಿಟಲ್ ಮೂಲಕ ಜನರಿಗೆ ಉತ್ತಮ ಸೇವೆ ಪಡೆಯುತ್ತಿದ್ದಾರೆ. ಅದರಲ್ಲೂ ಡಿಜಿಟಲ್ ಆರ್ಥಿಕತೆ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಪ್ರತಿ ಅಂಗಡಿಗಳಲ್ಲೂ ಕ್ಯೂಆರ್ ಕೋಡ್ ಬಳಸಿ ನಗದು ರಹಿತ ವ್ಯವಹಾರ ಹೆಚ್ಚಾಗಿ ನಡೆಯುತ್ತಿದೆ.