ಗಾಂಧಿನಗರ: ರೈಲ್ವೇ ಉದ್ಯೋಗ ಪಡೆಯುವ ಪ್ರಯತ್ನದಲ್ಲಿ ವ್ಯಕ್ತಿಯೋರ್ವ ತನ್ನ ಹೆಬ್ಬೆರಳಿನ ಚರ್ಮವನ್ನು ಬಿಸಿ ನೀರಿಗೆ ಅದ್ದಿ ತನ್ನ ಸ್ನೇಹಿತನ ಬೆರಳಿಗೆ ಅಂಟಿಸಿ ಉದ್ಯೋಗಕ್ಕಾಗಿ ಅಕ್ರಮ ನಡೆಸಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.
ಆಗಸ್ಟ್ 22 ರಂದು ಗುಜರಾತ್‍ನ ವಡೋದರಾ ನಗರದಲ್ಲಿ ನಡೆದ ರೈಲ್ವೇ ನೇಮಕಾತಿ ಪರೀಕ್ಷೆಗೆ ಮೊದಲು ಬಯೋಮೆಟ್ರಿಕ್ ಮೂಲಕ ಪರಿಶೀಲನೆ ಕಾರ್ಯ ನಡೆದಿತ್ತು. ಇದೇ ವೇಳೆ ಪರೀಕ್ಷಾ ಮೇಲ್ವಿಚಾರಕರು ಸ್ಯಾನಿಟೈಸರ್ ಅನ್ನು ಬೆರಳಿನ ಮೇಲೆ ಸಿಂಪಡಿಸಿದಾಗ ಕೈಗೆ ಅಂಟಿಸಿದ್ದ ಹೆಬ್ಬೆರಳಿನ ಚರ್ಮವು ಉದುರಿ ಕೆಳಗೆ ಬಿದ್ದಿದೆ. ಇದೀಗ ಈ ಸಂಬಂಧ ಬಿಹಾರದ ಮುಂಗೇರ್ ಜಿಲ್ಲೆಯ ಮನೀಶ್ ಕುಮಾರ್ ಮತ್ತು ಆತನ ಸ್ನೇಹಿತ ರಾಜಗುರುಗುಪ್ತಾ ನನ್ನು ವಡೋದರಾ ಪೊಲೀಸರು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್‍ಎಂ ವರೋಟಾರಿಯಾ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಧರ್ಮವನ್ನು ಪುನರ್ ಸಂಘಟಿಸುವ ಕೆಲಸ ಆಗಬೇಕಿದೆ: ಚಕ್ರವರ್ತಿ ಸೂಲಿಬೆಲೆ
ಇಬ್ಬರು ತಮ್ಮ 20ನೇ ವಯಸ್ಸಿನಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಆಗಸ್ಟ್ 22 ರಂದು ಇಲ್ಲಿನ ಲಕ್ಷ್ಮೀಪುರ ಪ್ರದೇಶದ ಕಟ್ಟಡವೊಂದರಲ್ಲಿ ರೈಲ್ವೆ ‘ಡಿ’ ಗ್ರೂಪ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಏರ್ಪಡಿಸಿತ್ತು. ಈ ಪರೀಕ್ಷೆಗೆ 600ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಇದನ್ನೂ ಓದಿ: ಆರಗ, VVIP ವ್ಯಕ್ತಿಗಳಿಗೆ ನಿವೇಶನ – ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂ ಸೂಚನೆ
ಪರೀಕ್ಷೆಯಲ್ಲಿ ಯಾವುದೇ ರೀತಿಯ ಮೋಸ ಆಗದಿರುವಂತೆ ತಡೆಗಟ್ಟಲು ಎಲ್ಲಾ ಅಭ್ಯರ್ಥಿಗಳು ತಮ್ಮ ಹೆಬ್ಬೆರಳಿನ ಗುರುತನ್ನು ನೀಡಬೇಕಾಗಿತ್ತು. ಹೀಗಾಗಿ ಪರೀಕ್ಷೆಗೂ ಮುನ್ನ ಬಯೋಮೆಟ್ರಿಕ್ ಸಾಧನದ ಮೂಲಕ ಅವರ ಆಧಾರ್ ಡೇಟಾದೊಂದಿಗೆ ಹೊಂದಾಣಿಕೆ ಮಾಡಲಾಯಿತು. ಈ ವೇಳೆ ಸಾಧನವು ಅಭ್ಯರ್ಥಿಯ ಹೆಬ್ಬೆರಳಿನ ಗುರುತನ್ನು ನೋಂದಾಯಿಸಲು ವಿಫಲವಾಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಮನೀಶ್ ಕುಮಾರ್ ಎಂದು ಹೆಸರು ತೋರಿಸಿಲ್ಲ. ಇದೇ ವೇಳೆ ಅಭ್ಯರ್ಥಿ ತನ್ನ ಎಡಗೈಯನ್ನು ಪ್ಯಾಂಟ್‍ನ ಜೇಬಿನೊಳಗೆ ಇಟ್ಟು ಹೆಬ್ಬೆರಳಿನಲ್ಲಿದ್ದ ಚರ್ಮವನ್ನು ಸರಿಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಮೇಲ್ವಿಚಾರಕರು ಎಡಗೈ ಹೆಬ್ಬೆರಳಿಗೆ ಸ್ಯಾನಿಟೈಸರ್ ಸಿಂಪಡಿಸಿದಾಗ, ಅದರ ಮೇಲೆ ಅಂಟಿಸಲಾದ ಚರ್ಮವು ಉದುರಿ ಹೋಗಿದೆ ಎಂದು ತಿಳಿಸಿದ್ದಾರೆ.
ನಂತರ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿ ತನ್ನ ನಿಜವಾದ ಹೆಸರು ರಾಜ್ಯಗುರು ಗುಪ್ತ, ತನ್ನ ಸ್ನೇಹಿತ ಮನೀಶ್ ಕುಮಾರ್‍ಗಾಗಿ ಪರೀಕ್ಷೆ ಬರೆಯಲು ಬಂದಿರುವುದಾಗಿ ತಿಳಿಸಿದ್ದಾನೆ. ರಾಜ್ಯಗುರು ಗುಪ್ತ ಓದುವುದರಲ್ಲಿ ಬುದ್ಧಿವಂತನಾಗಿದ್ದರಿಂದ ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಮನೀಶ್ ಕುಮಾರ್, ತನ್ನ ಬದಲು ಪರೀಕ್ಷೆ ಬರೆಯಲು ರಾಜುಗುಪ್ತನನ್ನು ಕಳುಹಿಸಲು ಆಲೋಚಿಸಿದ್ದ. ಹೀಗಾಗಿ ಪರೀಕ್ಷೆಗೂ ಒಂದು ದಿನಕ್ಕೂ ಮುನ್ನ ಮನೀಶ್ ಕುಮಾರ್ ಬಿಸಿ ನೀರಿಗೆ ತನ್ನ ಕೈ ಅದ್ದಿ, ನಂತರ ಬ್ಲೇಡ್ ಮೂಲಕ ಚರ್ಮವನ್ನು ತೆಗೆದು ಗುಪ್ತಾ ಎಡ ಹೆಬ್ಬೆರಳಿಗೆ ಅಂಟಿಸಿದ್ದನು. ಆದರೆ ಬಯೋಮ್ಯಾಟ್ರಿಕ್ಸ್ ವೇಳೆ ಹೆಬ್ಬೆರಳು ಉದುರಿ ಹೋಗಿದ್ದನ್ನು ಕಂಡ ಅಧಿಕಾರಿಗಳು ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಪೂರ್ಣ ನಾಟಕ ಬಹಿರಂಗಗೊಂಡಿದೆ.