Advertisements

ಹಾಡಹಗಲೇ ರೈಲ್ವೆ ನೌಕರನಿಗೆ ಚಾಕು ಇರಿತ!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹಾಡಹಗಲೇ ಮಾರಕಾಸ್ತ್ರಗಳು ಸದ್ದು ಮಾಡಿವೆ. ದುಷ್ಕರ್ಮಿಗಳು ರೈಲ್ವೆ ನೌಕರನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಗರದ ರೇಲ್ವೆ ಶೆಡ್ ಮುಂಭಾಗದಲ್ಲಿ ನಡೆದಿದೆ.

Advertisements

ಹುಬ್ಬಳ್ಳಿ – ಗದಗ ರಸ್ತೆಯಲ್ಲಿರುವ ಲೋಕೋ ಶೆಡ್ ಮುಂಭಾಗದಲ್ಲಿಯೇ ಚಂದ್ರಶೇಖರ್ ನಾಯ್ಡು ಎಂಬವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮೂರ್ನಾಲ್ಕು ಬಾರಿ ಇರಿದಿದ್ದರಿಂದ ಅವರಿಗೆ ತೀವ್ರವಾಗಿ ರಕ್ತಸ್ರಾವವಾಗಿದೆ.

Advertisements

ತಕ್ಷಣವೇ ಚಂದ್ರಶೇಖರ್ ಅವರನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಧಾರವಾಡದ ಸತ್ತೂರ ಬಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಕೇಶ್ವಾಪುರ ಠಾಣೆಯ ಇನ್ಸ್‍ಪೆಕ್ಟರ್ ಜಗದೀಶ್ ಹಂಚಿನಾಳ ಸ್ಥಳಕ್ಕೆ ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇದನ್ನೂ ಓದಿ:  ಎರಡು ದಿನಗಳಲ್ಲಿ 20ಕ್ಕೂ ಹೆಚ್ಚು ಮನೆಗಳ್ಳತನ – ಆತಂಕದಲ್ಲಿ ಗಡಿಭಾಗದ ಜನರು

ಘಟನೆಯ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisements
Advertisements
Exit mobile version