ಶಿಮ್ಲಾ: ಭಾರೀ ಮಳೆಯಿಂದಾಗಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶವನ್ನು ಸಂಪರ್ಕಿಸುವ ಚಕ್ಕಿ ನದಿಯ ಮೇಲಿನ ರೈಲ್ವೆ ಸೇತುವೆ ಶನಿವಾರ ಕುಸಿದಿದೆ.
#WATCH | Himachal Pradesh: The railway bridge on Chakki river in Himachal Pradesh’s Kangra district damaged due to flash flood, and collapsed today morning. The water in the river is yet to recede: Northern Railways pic.twitter.com/ApmVkwAkB8
— ANI (@ANI) August 20, 2022
Advertisement
ಹಿಮಾಚಲ ಪ್ರದೇಶದಲ್ಲಿರುವ ಬಲ್ಹ್, ಸದರ್, ಥುನಾಗ್, ಮಂಡಿ, ಲಮಾಥಾಚ್ ಸ್ಥಳಗಳಲ್ಲಿ ಧಾರಕಾರ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಶಾಲೆಗಳಿಗೆ ಶನಿವಾರ ರಜೆಯನ್ನು ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ಅವರು ಘೋಷಿಸಿದ್ದರು. ಇದನ್ನೂ ಓದಿ: ಅಪ್ಪಾ, ನೀವು ಯಾವಾಗ್ಲೂ ನನ್ನ ಹೃದಯದಲ್ಲಿದ್ದೀರಿ- ರಾಜೀವ್ ಗಾಂಧಿ ಜನ್ಮದಿನದಂದು ನೆನೆದ ರಾಹುಲ್
Advertisement
Advertisement
ಕಳೆದೆರಡು ದಿನಗಳಿಂದ ಮಂಡಿಯಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ (ಕಾಲೇಜುಗಳು ಮತ್ತು ಐಟಿಐ ಹೊರತುಪಡಿಸಿ) ಆಗಸ್ಟ್ 20ರಂದು ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಶುಕ್ರವಾರ ಸಂಜೆ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ಮೋದಿ, ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಅವಹೇಳನಕಾರಿ ಪೋಸ್ಟ್ – ಕಾನ್‍ಸ್ಟೇಬಲ್ ಅಮಾನತು