ರಾಯಚೂರು: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಬರಲು ಪರದಾಡುತ್ತಿದ್ದಾರೆ.
Advertisement
ರಾಯಚೂರಿನ ಉರಗ ತಜ್ಞ ಅಫ್ಸರ್ ಮಗ ವೈದ್ಯಕೀಯ ವಿದ್ಯಾರ್ಥಿ ಮೊಹಮ್ಮದ್ ಅಸರ್ ಹುಸೇನ್ ಉಕ್ರೇನ್ ಗಡಿಗೆ ತಲುಪಿ ವಿಮಾನ ನಿಲ್ದಾಣ ಬಳಿ ಬಂದಿದ್ದರೂ ದೇಶಕ್ಕೆ ಮರಳಲು ಆಗದೆ ಪರದಾಡುತ್ತಿದ್ದಾರೆ. ಇದನ್ನೂ ಓದಿ: ನಮ್ಮ ಸ್ವಂತ ಜನರನ್ನು ನಾವು ಬಿಟ್ಟುಕೊಡಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ರಾಹುಲ್ ಕಿಡಿ
Advertisement
Advertisement
ಲಕ್ಷ ಲಕ್ಷ ಸಾಲ ಮಾಡಿ ಮಗನನ್ನು ಓದಿಸಲು ಉಕ್ರೇನ್‍ಗೆ ಕಳುಹಿಸಿದ್ದ ಉರಗ ತಜ್ಞ ಅಫ್ಸರ್ ಮಗನ ಸ್ಥಿತಿ ಕಂಡು ಬೇಸರ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ. ತಂದೆ ಅಫ್ಸರ್‍ಗೆ ಕರೆ ಮಾಡಿ ಕಣ್ಣೀರಿಟ್ಟಿರುವ ಮೊಹಮ್ಮದ್ ಹುಸೇನ್ ಉಕ್ರೇನ್ ಗಡಿ ಭಾಗ ತಲುಪಿದರೂ ವಿಮಾನ ಸಿಕ್ಕಿಲ್ಲ. ಎರ್‌ಪೋರ್ಟ್ ಬಳಿಯ ಸ್ಥಿತಿ ಆತಂಕ ವ್ಯಕ್ತಪಡಿಸಿದ್ದಾನೆ. ಒಂದು ದಿನದಿಂದ ಎರ್‌ಪೋರ್ಟ್ ಬಳಿ ಕಾದು ಕುಳಿತರ ವಿಮಾನ ಸಿಕ್ಕಿಲ್ಲ. ಉಕ್ರೇನ್ ಗಡಿಭಾಗದ ಎರ್‌ಪೋರ್ಟ್ ವ್ಯಾಪ್ತಿಯಲ್ಲಿ ಸಾವಿರಾರು ಜನ ಸೇರಿದ್ದು, ಜನಜಂಗುಳಿಯಾಗಿದೆ. ಯಾವಾಗ ವಿಮಾನ ಸಿಗುತ್ತೆ ಅಂತ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ ಎಂದು ಅಸರ್ ಹುಸೇನ್ ತಿಳಿಸಿದ್ದಾರೆ. ಇದನ್ನೂ ಓದಿ: ‘ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!