ರಾಯಚೂರು: ನಗರದಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹಿಸಿ ಹೋರಾಟಗಾರರು ಶಾಸಕ ಡಾ.ಶಿವರಾಜ್ ಪಾಟೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಏಮ್ಸ್ ಹೋರಾಟ ಸಮಿತಿ ಹಾಗೂ ಶಾಸಕ ಡಾ.ಶಿವರಾಜ್ ಪಾಟೀಲ್ ನಡುವೆ ವಾಗ್ವಾದ ನಡೆದಿದೆ.
ರಾಯಚೂರು ಜಿಲ್ಲೆಗೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ. ಐಐಟಿಯನ್ನ ಧಾರವಾಡಕ್ಕೆ ನೀಡಲಾಯಿತು. ಪರ್ಯಾಯವಾಗಿ ಏಮ್ಸ್ ನಮ್ಮ ಜಿಲ್ಲೆಗೆ ನೀಡುವಂತೆ ಹೋರಾಟ ಸಮಿತಿ ಆಗ್ರಹಿಸಿದೆ. ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜಿಲ್ಲೆಗೆ ಅನ್ಯಾಯವಾಗುತ್ತಿದೆ ಅಂತ ಹೋರಾಟಗಾರರು ಧಿಕ್ಕಾರವನ್ನು ಸಹ ಕೂಗಿದ್ದಾರೆ. ಇದನ್ನೂ ಓದಿ:ದೇವಸ್ಥಾನ ಕೆಡವಿದರೆ ನಮಗೆ ಒಳ್ಳೆದಾಗಲ್ಲ- ಶೋಭಾ ಕರಂದ್ಲಾಜೆ
ತಮ್ಮ ವಿರುದ್ಧ ಘೋಷಣೆ ಕೂಗಿದ್ದರಿಂದ ಸಿಟ್ಟಿಗೇರಿದ ಶಾಸಕರು ಜಿಲ್ಲೆಯಲ್ಲಿ ನಾನೊಬ್ಬನೇ ಶಾಸಕನಿಲ್ಲ. ಇನ್ನೂ ಆರು ಜನ ಶಾಸಕರಿದ್ದಾರೆ. ಅವರ ಕಚೇರಿ ಮುಂದೆಯೂ ಧರಣಿ ಮಾಡಿ. ಅಲ್ಲಿಯೂ ಘೋಷಣೆ ಕೂಗಿ, ನಿಮ್ಮ ಹೋರಾಟಕ್ಕೆ ಬೆಂಬಲಿಸಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇನ್ನುಳಿದ ಶಾಸಕರ ರಾಜೀನಾಮೆ ಪಡೆಯುವ ಶಕ್ತಿ ನಿಮಗಿದೆಯೇ ಅಂತ ಏರು ಧ್ವನಿಯಲ್ಲಿ ಹೋರಾಟಗಾರರ ಜೊತೆ ವಾಗ್ವಾದ ನಡೆಸಿದರು. ಇದನ್ನೂ ಓದಿ:ಭಾರತ ಬಂದ್‍ಗೆ ಕರ್ನಾಟಕದಲ್ಲೂ ಸಂಪೂರ್ಣ ಬೆಂಬಲ: ಕುರುಬೂರು ಶಾಂತಕುಮಾರ್