ರಾಯಚೂರು: ಚುನಾವಣೆ ಹಿನ್ನೆಲೆ ರಾಯಚೂರಿನಲ್ಲಿ ತೆರೆಯಲಾದ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರ ದರ್ಬಾರ್ ಜೋರಾಗಿದೆ. ನಗರದ ಆಶ್ರಯ ಕಾಲೋನಿಯ ಚೆಕ್ ಪೋಸ್ಟ್ ನಲ್ಲಿ ಹಣ ನೀಡದಿದ್ದಕ್ಕೆ ಪೊಲೀಸರು ಥಳಿಸಿರುವ ಘಟನೆ ನಡೆದಿದೆ.
ಚೆಕ್ ಪೋಸ್ಟ್ ಪೊಲೀಸರು ಪ್ರತಿ ವಾಹನವನ್ನು ತಪಾಸಣೆ ಮಾಡುತ್ತಿದ್ದರು. ಡಿಸೇಲ್, ಪೆಟ್ರೋಲ್ ತೆಗೆದುಕೊಂಡು ಆಟೋದಲ್ಲಿ ಬಂದಿದ್ದ ರಂಗಪ್ಪನಿಗೆ ಕೆನ್ನೆ ಹಾಗೂ ಬೆನ್ನಿನ ಮೇಲೆ ರಕ್ತ ಬರುವಂತೆ ಹೊಡೆದಿದ್ದಾರೆ ಅಂತಾ ಆರೋಪಿಸಲಾಗಿದೆ.
Advertisement
Advertisement
ಡಿಸೇಲ್, ಪೆಟ್ರೋಲ್ ತೆಗೆದುಕೊಂಡು ಆಟೋದಲ್ಲಿ ರಾಯಚೂರಿನಿಂದ ಚಂದ್ರಬಂಡಾ ಗ್ರಾಮಕ್ಕೆ ಹೋಗುತ್ತಿದ್ದೆವು. ಚೆಕ್ ಪೋಸ್ಟ್ ಬಳಿ ಪೊಲೀಸರು ನಮ್ಮ ವಾಹನವನ್ನು ಚೆಕ್ ಮಾಡಿದರು. ಎರಡು ಬಿಲ್ ಇತ್ತು ಒಂದು ಬಿಲ್ ಇರಲಿಲ್ಲ. ಆ ಒಂದು ಬಿಲ್ ಅನ್ನು ತೆಗೆದುಕೊಂಡು ಬರಲು ಹೇಳಿದರು. ಹಣ ಇಟ್ಟಿದ್ದೀರಾ ಎಂದು ಕೇಳಿದರು ಇಲ್ಲ ಎಂದೆವು. ಜೇಬಿನಲ್ಲಿ 3000 ರೂ. ಇತ್ತು. ಮಾರ್ಕೆಟ್ ಯಾರ್ಡ್ ಠಾಣೆ ಹೆಡ್ ಕಾನ್ಸ್‍ಟೇಬಲ್ ರಾಜಪ್ಪ ಜೇಬಿಗೆ ಕೈ ಹಾಕಿದರು. ಕೆನ್ನೆ ಹಾಗೂ ಬೆನ್ನಿನ ಮೇಲೆ ಹೊಡೆದರು. ರಾಜಪ್ಪ ಈ ಹಿಂದೆಯೂ ಹಣ ಕೇಳಿದ್ದ ಎಂದು ರಂಗಪ್ಪನ ಅಣ್ಣ ಆರೋಪ ಮಾಡಿದರು.
Advertisement
Advertisement
ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗಾಯಾಳು ರಂಗಪ್ಪ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕಿಶೋರ್ ಬಾಬು ಅವರಿಗೆ ದೂರು ನೀಡಿದ್ದಾ ರೆ. ರಾಜಪ್ಪ ಈ ಹಿಂದೆಯೂ ಹಣ ಕೇಳಿದ್ದ, ಈ ಬಾರಿಯೂ ಹಣ ನೀಡದ್ದಕ್ಕೆ ಥಳಿಸಿದ್ದಾನೆ ಅಂತ ಗಾಯಾಳು ರಂಗಪ್ಪ ಆರೋಪಿಸಿದ್ದಾರೆ.