ರಾಯಚೂರು: ಸರ್ಕಾರಿ ಉದ್ಯೋಗ (Government Job) ಕೈತಪ್ಪಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಡೆತ್ ನೋಟ್ ಬರೆದು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು (Raichur) ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.
ಚಿಕ್ಕಬೂದೂರು ಗ್ರಾಮದ 25 ವರ್ಷದ ಯುವಕ ಚನ್ನಬಸವ ದೇವದುರ್ಗದ ಖಾಸಗಿ ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಹೊಸ ʻಎಲಿವೇಟೆಡ್ ವಾಕ್‌ವೇʼ ಆರಂಭ
6 ರಿಂದ 8ನೇ ತರಗತಿ ಶಿಕ್ಷಕರ ಹುದ್ದೆ ನೇಮಕಾತಿ (Teacher Recruitment) ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಚನ್ನಬಸವನಿಗೆ ಕೊನೆಗೆ ಉದ್ಯೋಗ ಕೈತಪ್ಪಿತ್ತು. ಬಳಿಕ ಮತ್ತೊಂದು ಬಾರಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ಚನ್ನಬಸವ, ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಪರೀಕ್ಷೆ ಪಾಸ್ ಮಾಡಲು ದೇವದುರ್ಗದಲ್ಲಿ ಪ್ರತ್ಯೇಕ ರೂಮ್ ಮಾಡಿಕೊಂಡು ತಯಾರಿ ನಡೆಸಿದ್ದ. ಆದ್ರೆ ಮನನೊಂದು ಏಕಾಏಕಿ ಆಡಳಿತ ವ್ಯವಸ್ಥೆ ವಿರುದ್ಧ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರಕ್ಕೆ ಹೈಕೋರ್ಟ್ ತರಾಟೆ – ಕನ್ನಡ ಶಿಕ್ಷಕರನ್ನೇ ನೇಮಿಸುವಂತೆ ಆದೇಶ
ಎಲ್ಲರನ್ನು ನಾನು ಕ್ಷಮೆಯಾಚಿಸುತ್ತಾ. ನಾನು ತೆಗೆದುಕೊಂಡ ನಿರ್ಧಾರ ಸರಿಯೋ ತಪ್ಪೋ ಗೊತ್ತಿಲ್ಲ. ಆದ್ರೆ ನನ್ನ ಮನಸ್ಸು ಆತ್ಮ ನನ್ನನ್ನು ಅಗಲಿದ ಅನುಭವವಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ವ್ಯವಸ್ಥೆ ನನಗೆ ಶಿಕ್ಷೆ ನೀಡಿದ ಆಡಳಿತ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ. ನನ್ನ ಸಾವಿಗೆ ನಾನೇ ಕಾರಣನಾಗಿರುತ್ತೇನೆ. ಮತ್ತಾರೂ ಕಾರಣರಲ್ಲ. ನನ್ನ ಉಳಿದ ಪತ್ರಗಳನ್ನು ನನ್ನ ಕುಟುಂಬಕ್ಕೆ ತಲುಪಿಸಿ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ (Devadurga Police Station) ಪ್ರಕರಣ ದಾಖಲಾಗಿದೆ.
Web Stories