ವಾಷಿಂಗ್ಟನ್: ಸ್ನೇಹತನನ್ನು ರಕ್ಷಿಸಲು ಹೋಗಿ ಜಲಪಾತದಲ್ಲಿ ಧುಮುಕಿ ರಾಯಚೂರು ಮೂಲದ ಯುವಕ ಮೃತಪಟ್ಟ ಘಟನೆ ಬುಧವಾರ ಅಮೆರಿಕದ ಟರ್ನರ್ ಫಾಲ್ಸ್ ನಲ್ಲಿ ನಡೆದಿದೆ.
ಅಜಯ್ ಕುಮಾರ್ (24) ಮೃತಪಟ್ಟ ಯುವಕ. ಅಜಯ್ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಶ್ರೀಪುರಂಜಂಕ್ಷನ್ ನಿವಾಸಿ. ಕಳೆದ ಎಂಟು ತಿಂಗಳ ಹಿಂದೆ ಅಜಯ್ ಅಮೇರಿಕದ ಹೂಸ್ಟನ್ ನಲ್ಲಿ ಎಂ.ಎಸ್ ಎಂಜಿನಿಯರಿಂಗ್ ಮಾಡಲು ತೆರಳಿದ್ದನು.
ಬುಧವಾರ ಅಜಯ್ ತನ್ನ ಸ್ನೇಹಿತರ ಜೊತೆ ಟರ್ನರ್ ಫಾಲ್ಸ್‌ಗೆ ತೆರಳಿದ್ದನು. ಜಲಪಾತಕ್ಕೆ ತೆರಳಿದಾಗ ಸ್ನೇಹಿತ ಜಾರಿ ಬಿದ್ದಿದ್ದು, ಆತನನ್ನು ರಕ್ಷಿಸಲು ಅಜಯ್ ಜಲಪಾತಕ್ಕೆ ಧುಮುಕಿದ್ದನು. ಈ ವೇಳೆ ಇಬ್ಬರೂ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇಂದು ಅಜಯ್ ಮೃತದೇಹ ರಾಯಚೂರಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.