ರಾಯಚೂರು: ನಗರದ ಇಂದಿರಾನಗರದಲ್ಲಿರುವ ಸಾಯಿಬಾಬಾ ಮಂದಿರದ ಬೀಗ ಮುರಿದು ಕಳ್ಳತನಕ್ಕೆ ವಿಫಲಯತ್ನ ನಡೆದಿದೆ. ಮಂದಿರದ ಹುಂಡಿ ಹೊಡೆಯಲು ಯತ್ನ ನಡೆದಿದೆಯಾದರೂ ಸಫಲವಾಗಿಲ್ಲ.
ಸಾಯಿಬಾಬಾ ಮಂದಿರದಲ್ಲಿನ ವಸ್ತುಗಳು ಚಲ್ಲಾಪಿಲ್ಲಿ ಮಾಡಲಾಗಿದೆ. ಆದರೆ ಕಳ್ಳತನಕ್ಕೆ ಯತ್ನಿಸಿದರೂ ಯಾವುದೇ ವಸ್ತು, ಆಭರಣ ಕಳ್ಳತನವಾಗಿಲ್ಲ. ಶುಕ್ರವಾರ ರಾತ್ರಿ ವೇಳೆ ಮಂದಿರಕ್ಕೆ ನುಗ್ಗಿರುವ ಕಳ್ಳರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.