ರಾಯಚೂರು: ಕೋಟ್ಯಂತರ ರಾಮಭಕ್ತರ ಕನಸಾಗಿದ್ದ ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram Mandir) ರಾಮನ ಪ್ರಾಣಪ್ರತಿಷ್ಠಾಪನೆಗೆ ನಾಲ್ಕೇ ದಿನಗಳು ಬಾಕಿ ಇವೆ. ಇನ್ನೂ ರಾಮಮಂದಿರವನ್ನು ಕಣ್ತುಂಬಿಕೊಳ್ಳಲು ರಾಯಚೂರಿನ (Raichur) ರಾಮಭಕ್ತನೊಬ್ಬ ಪಾದಯಾತ್ರೆ ಹೊರಟಿದ್ದು 1,250 ಕಿ.ಮೀ ಕ್ರಮಿಸಿದ್ದು, ಇನ್ನೂ ಕೇವಲ 250 ಕಿ.ಮೀ ಮಾತ್ರ ಬಾಕಿ ಉಳಿದಿದೆ.
ವಿನೋದ್ ರೆಡ್ಡಿ ಎಂಬವರು ಕಳೆದ ಡಿ.13 ರಿಂದ ರಾಯಚೂರಿನಿಂದ ಪಾದಯಾತ್ರೆ ಆರಂಭಿಸಿದ್ದರು. ಈಗಾಗಲೇ ಯುವಕ 1,250 ಕಿ.ಮೀ ಕ್ರಮಿಸಿದ್ದು ಜನವರಿ 22ರ ಒಳಗಾಗಿ ಅಯೋಧ್ಯೆಯನ್ನು ತಲುಪುವ ಗುರಿ ಹೊಂದಿದ್ದಾರೆ. ಪ್ರತಿದಿನ 45 ರಿಂದ 50 ಕಿ.ಮೀ ಕ್ರಮಿಸುತ್ತಿದ್ದು, ಇದೀಗ ಉತ್ತರಪ್ರದೇಶದ ಪ್ರಯಾಗ್ ರಾಜ್ ತಲುಪಿದ್ದಾರೆ. ಇದನ್ನೂ ಓದಿ: ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್- ವಿಜ್ಞಾನ ಸಾಹಿತ್ಯ ಹಬ್ಬದಲ್ಲಿ ಮಿಂಚಿದ ಕನ್ನಡ
ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಹೊತ್ತಿಗೆ ಅಯೋಧ್ಯೆ ತಲುಪುವ ಗುರಿ ಹೊಂದಿರುವ ಅವರು, ಪ್ರಾಣಪ್ರತಿಷ್ಠಾಪನೆಯ ದಿನವೇ ಅಯೋಧ್ಯೆ ತಲುಪುವ ಸಾಧ್ಯತೆ ಇದೆ.
ಮಾರ್ಗಮಧ್ಯೆ ಜನರು ನೀಡುವ ಆಹಾರ ಸ್ವೀಕರಿಸಿ, ದೇವಸ್ಥಾನಗಳಲ್ಲಿ ವಿಶ್ರಾಂತಿ ಪಡೆದು ಬೆಳಗ್ಗಿನ ಜಾವದಿಂದ ಸಂಜೆಯವರೆಗೆ ಪಾದಯಾತ್ರೆ ಮುಂದುವರಿಸುತ್ತಿದ್ದಾನೆ. ಮಾರ್ಗಮಧ್ಯೆ ಶ್ರೀರಾಮನ ಭಕ್ತರು ತೋರಿಸುವ ಪ್ರೀತಿ ಗೌರವ ಇನ್ನಷ್ಟು ಶಕ್ತಿ ನೀಡಿದೆ. ಶ್ರೀರಾಮನೆ ಪ್ರಾಣಪ್ರತಿಷ್ಠಾಪನೆ ವೇಳೆಗೆ ನನ್ನನ್ನು ಕರೆಸಿಕೊಳ್ಳುತ್ತಾನೆ ಎಂದು ವಿನೋದ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣದಲ್ಲಿ ರಾಯಚೂರು ಯುವಶಿಲ್ಪಿಯ ಕಲಾ ಸೇವೆ