ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ 60 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಾವುದೇ ಕನಿಷ್ಠ ಸೌಲಭ್ಯ ಹಾಗೂ ಸಿಬ್ಬಂದಿಯಿಲ್ಲದೆ ಉದ್ಘಾಟನೆಯಾದ ಒಂದೇ ದಿನಕ್ಕೆ ಬಾಗಿಲು ಮುಚ್ಚಿದೆ.
ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಅವರು ಸಚಿವ ಹಾಲಪ್ಪ ಆಚಾರ್ ಅವರನ್ನು ಕರೆಸಿ ತರಾತುರಿಯಲ್ಲಿ ಉದ್ಘಾಟನೆ ಮಾಡಿಸಿದ್ದರು. ಆಸ್ಪತ್ರೆಗೆ 12 ವೈದ್ಯರು ಸೇರಿದಂತೆ 50 ಸಿಬ್ಬಂದಿ ಅಗತ್ಯವಿದೆ. ಜೊತೆಗೆ ಆಸ್ಪತ್ರೆಯಲ್ಲಿ ಅಗತ್ಯವಿರುವ ಉಪಕರಣಗಳನ್ನು ತರಿಸಬೇಕು. ಆದರೆ ಇದ್ಯಾವುದರ ಬಗ್ಗೆಯೂ ಆಸಕ್ತಿ ತೋರದ ಶಾಸಕ ವೆಂಕಟಪ್ಪ ನಾಯಕ್ ಉದ್ಘಾಟನೆಗೆ ಮಾತ್ರ ಆಸಕ್ತಿ ತೋರಿದ್ದಾರೆ.
Advertisement
Advertisement
ಜನವರಿ 11 ರಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಕರೆಸಿ ಉದ್ಘಾಟನೆ ಮಾಡಿಸಿದ್ದಾರೆ. ಕಟ್ಟಡ ನಿರ್ಮಾಣವಾಗಿ ಮೂರುವರೆ ವರ್ಷ ಬಳಿಕ ಯಾವುದೇ ಸೌಲಭ್ಯಗಳಿಲ್ಲದೆ ಉದ್ಘಾಟನೆಯಾದ ಆಸ್ಪತ್ರೆಗೆ ಒಂದೇ ದಿನಕ್ಕೆ ಬೀಗ ಹಾಕಲಾಗಿದೆ. ಇದನ್ನೂ ಓದಿ: ಅಶ್ಲೀಲ ಪದ ಬಳಸಿ ನಿಂದನೆ – ಸಭೆಯಲ್ಲಿ ಕಾಮನ್ ಸೆನ್ಸ್ ಮರೆತ ಜೆಡಿಎಸ್ ಶಾಸಕ
Advertisement
Advertisement
ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಕ ವಿಚಾರಕ್ಕೆ ಪ್ರಶ್ನಿಸಿದಾಗ ಮಾಧ್ಯಮದವರ ಮೇಲೆ ಎಗರಾಡಿದ್ದ ಶಾಸಕ ವಿವಾದಕ್ಕೀಡಾಗಿದ್ದರು. ಕೋವಿಡ್ ಮೂರನೇ ಅಲೆ ವೇಳೆ ಅನುಕೂಲಕ್ಕೆ ಬರಬೇಕಿದ್ದ ಆಸ್ಪತ್ರೆ ದುಸ್ಥಿತಿಗೆ ಈಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್