ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆಗೆ (Election) ರಾಯಚೂರು (Raichuru) ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತದಾರರಿಗೆ ಅರಿವು ಮೂಡಿಸಲು ಜಿಲ್ಲಾದ್ಯಂತ ಇವಿಎಂ (EVM) ಪ್ರಾತ್ಯಕ್ಷಿಕೆ ಕೇಂದ್ರಗಳನ್ನ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.
ಇವಿಎಂ ಮೂಲಕ ನಡೆಯುವ ಮತದಾನ ಪಾರದರ್ಶಕವಾಗಿರುತ್ತದೆ. ಇದರ ಬಗ್ಗೆ ಜನರಿಗೆ ಮಾಹಿತಿ ನೀಡಲು ಇವಿಎಂ ಯಂತ್ರದ ಮಾದರಿಯನ್ನು ಸ್ಥಾಪಿಸಲಾಗಿದೆ. ಮತದಾನದ ಬಗ್ಗೆ ಗೊಂದಲಗಳಿದ್ದರೆ ಮತದಾರರು ಪರಿಹರಿಸಿಕೊಳ್ಳಲು ಪ್ರಾತ್ಯಕ್ಷಿಕೆ ಕೇಂದ್ರಗಳು ನೆರವಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಯಚೂರು ಜಿಲ್ಲಾ ಚುನಾವಣಾ ಐಕಾನ್ ಆಗಿ ಬಾಹುಬಲಿ ನಿರ್ದೇಶಕ ರಾಜಮೌಳಿ ನೇಮಕ
ಜಿಲ್ಲೆಯಲ್ಲಿ 6 ಮೊಬೈಲ್ ಕೇಂದ್ರ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಚೇರಿ, ವಿಧಾನಸಭಾ ಕ್ಷೇತ್ರಗಳ ಆರ್‍ಓ, ಎಸಿ ಕಚೇರಿ, ಇಓ ಕಚೇರಿ, ತಹಶೀಲ್ದಾರ್ ಕಚೆರಿಗಳಲ್ಲಿ ಪ್ರಾತ್ಯಕ್ಷಿಕೆ ಕೇಂದ್ರಗಳನ್ನ ತೆರೆಯಲಾಗಿದೆ. 3522 ಬಿಯುಗಳು, 2468 ಸಿಯುಗಳು, 2677 ವಿವಿ ಪ್ಯಾಟ್ ಯಂತ್ರಗಳು ಬಂದಿವೆ. ಮೊದಲ ಹಂತದ ತಪಾಸಣೆಯಲ್ಲಿ 4 ಸಿಯು, 4 ಬಿಯು, 8 ವಿವಿಪ್ಯಾಟ್ (VVPAT) ಯಂತ್ರಗಳು ತಾಂತ್ರಿಕ ದೋಷ ಹೊಂದಿರುವುದು ಕಂಡು ಬಂದಿದೆ. ಅಂತಹ ಒಟ್ಟು 16 ಯಂತ್ರಗಳನ್ನು ತಿರಸ್ಕರಿಸಿ ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಹೇಳಿಕೆ ಬೆನ್ನಲ್ಲೇ ಆ್ಯಕ್ಟೀವ್ ಆದ ವಿ.ಸೋಮಣ್ಣ ಬೆಂಬಲಿಗರು