ರಾಯಚೂರು: ತಾಯಿಯನ್ನೇ ಕೊಲೆ ಮಾಡಲು ಯತ್ನಿಸಿದ್ದ ಆರೋಪಿ ಮಗನಿಗೆ ಜಿಲ್ಲಾ ಸತ್ರ ನ್ಯಾಯಾಲವು 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರಾಯಚೂರು ತಾಲೂಕಿನ ಹಿರಾಪುರದ ಗ್ರಾಮದ ಈರೇಶ್ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ. ನರಸಮ್ಮ ಹಲ್ಲೆಗೊಳಗಾಗಿದ್ದ ತಾಯಿ. ಕೋರ್ಟ್ ಆರೋಪಿಗೆ 5 ವರ್ಷ ಜೈಲು ಶಿಕ್ಷೆಯ ಜೊತೆಗೆ 27,500 ರೂ. ದಂಡವನ್ನು ವಿಧಿಸಿದೆ.
ಏನಿದು ಪ್ರಕರಣ?:
ನರಸಮ್ಮ ಅವರು ಆಸ್ತಿಯನ್ನು ಮಾರಿ ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಆ ಹಣವನ್ನು ತನಗೆ ನೀಡುವಂತೆ ಮಗ ಈರೇಶ್ ಒತ್ತಾಯಿಸಿದ್ದ. ಆದರೆ ನರಸಮ್ಮ ನನ್ನ ಜೀವನೋಪಾಯಕ್ಕೆ ಈ ಹಣ ಬೇಕು. ನಾನು ಕೊಡುವುದಿಲ್ಲ ಅಂತ ಮಗನಿಗೆ ಹೇಳಿದ್ದರು. ಇದರಿಂದಾಗಿ ಇಬ್ಬರ ನಡುವೆ ವಾಗ್ದಾಳಿ ಕೂಡ ಆಗಿತ್ತು. ಹಣ ಕೊಡಲಿಲ್ಲವೆಂದು ಈರೇಶ್ 2017ರ ಜುಲೈನಲ್ಲಿ ತಾಯಿಯ ಮೇಲೆ ಹಲ್ಲೆ ಮಾಡಿದ್ದ.
ಈ ಕುರಿತು ನರಸಮ್ಮ ಯರಗೇರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈರೇಶ್‍ನನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದರು. ಪ್ರಕರಣ ನಡೆದು 18 ತಿಂಗಳ ಬಳಿಕ ಆರೋಪಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv