ಮೆಲ್ಬರ್ನ್: ಪ್ರತಿಷ್ಠೆಯ ಕಣವಾಗಿರುವ ‘ಬಾಕ್ಸಿಂಗ್ ಡೇ’ ಪಂದ್ಯಕ್ಕೆ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ಕಸರತ್ತು ನಡೆಸುತ್ತಿದ್ದು ಆರಂಭಿಕ ಬ್ಯಾಟ್ಸ್ ಮನ್‍ಗಳಾದ ಕೆ.ಎಲ್.ರಾಹುಲ್ ಮತ್ತು ಮುರಳಿ ವಿಜಯ್ ಅವರ ಬದಲಾಗಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಹಾಗೂ ಆಂಧ್ರದ ಹನುಮ ವಿಹಾರಿ ಅವರು ಕಣಕ್ಕೆ ಇಳಿಯುವ ಸಾಧ್ಯತೆಯಿದೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ತಲಾ ಒಂದು ಜಯ ಸಾಧಿಸಿದ್ದು, ಬುಧವಾರದಿಂದ ಮೆಲ್ಬರ್ನ್ ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್ ಉಭಯ ತಂಡಗಳಿಗೆ ಸವಾಲಾಗಿದೆ.
Advertisement
ಅಡಿಲೇಡ್‍ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಭಾರತ 31 ರನ್‍ಗಳಿಂದ ಗೆದ್ದಿದ್ದರೆ, ಪರ್ತ್‍ನಲ್ಲಿ ನಡೆದ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ 146 ರನ್‍ಗಳಿಂದ ಗೆದ್ದು ಸಮಬಲದ ಹೋರಾಟ ನೀಡಿದೆ.
Advertisement
Advertisement
ಬಾಕ್ಸಿಂಗ್ ಡೇ ಅಂದ್ರೆ ಏನು?:
ಕ್ರಿಸ್ಮಸ್ ನಂತರದ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಈ ಪರಿಕಲ್ಪನೆ ಆರಂಭಗೊಂಡದ್ದು ಇಂಗ್ಲೆಂಡ್‍ನಲ್ಲಿ. ಆದರೆ ಈ ದಿನವನ್ನು ಐರ್ಲೆಂಡ್ ಮತ್ತು ಸ್ಪೇನ್‍ನಲ್ಲಿ ಸೇಂಟ್ ಸ್ಟೀಫನ್ಸ್ ದಿನ ಎಂದು ಹೆಸರಿನಿಂದ ಕರೆಯಲಾಗುತ್ತದೆ. ಪೋಲೆಂಡ್, ರೊಮೇನಿಯಾ, ಹಂಗೇರಿ, ಜರ್ಮನಿ ಮತ್ತು ನೆದರ್ಲೆಂಡ್ಸ್‍ನಲ್ಲಿ ಬಾಕ್ಸಿಂಗ್ ಡೇ ಬದಲಾಗಿದೆ ಎರಡನೇ ಕ್ರಿಸ್‍ಮಸ್ ದಿನ ಎಂದು ಸಂಭ್ರಮಿಸಲಾಗುತ್ತದೆ.
Advertisement
ಯುರೋಪ್ ರಾಷ್ಟ್ರಗಳ ಚರ್ಚ್ ನಲ್ಲಿ ವರ್ಷಾಂತ್ಯದ ಕೊನೆಯ ವಾರವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ವೇಳೆ ಚರ್ಚ್‍ಗಳಲ್ಲಿ ಪೊಟ್ಟಣಗಳನ್ನು (ಬಾಕ್ಸ್) ಇಟ್ಟು ಹಣ ಮತ್ತು ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಪಡೆಯಲಾಗುತ್ತದೆ. ಈ ಪೊಟ್ಟಣಗಳಿಂದಲೇ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಆಸ್ಟ್ರೇಲಿಯಾ ಕ್ರಿಕೆಟ್ ಕ್ಲಬ್ ಡಿಸೆಂಬರ್ 26 ರಂದು ಟೆಸ್ಟ್ ಪಂದ್ಯವನ್ನು ನಡೆಸುತ್ತಾ ಬಂದಿರುವ ಕಾರಣ ಈ ಟೆಸ್ಟ್ ಪಂದ್ಯವನ್ನು `ಬಾಕ್ಸಿಂಗ್ ಡೇ’ ಪಂದ್ಯ ಎಂದೇ ಕರೆಯಲಾಗುತ್ತದೆ.
ಲಕ್ಕಿ ಕ್ರೀಡಾಂಗಣ:
ಮೆಲ್ಬರ್ನ್ ಮೈದಾನ ಆಸ್ಟ್ರೇಲಿಯಾ ತಂಡದ ಲಕ್ಕಿ ಕ್ರೀಡಾಂಗಣವಾಗಿದೆ. ಇಲ್ಲಿ ಆತಿಥೇಯರು ಉತ್ತಮ ಸಾಧನೆ ಮಾಡಿದ್ದು, ಆಡಿದ ಎಲ್ಲ ತಂಡಗಳ ಮೇಲೆಯೂ ಆಧಿಪತ್ಯ ಸ್ಥಾಪಿಸಿದ್ದಾರೆ. ಉಭಯ ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿರುವ ಕಾರಣ ಬಾಕ್ಸಿಂಗ್ ಡೇ ಪಂದ್ಯ ಕುತೂಹಲವನ್ನು ಮೂಡಿಸಿದೆ.
.@Hanumavihari going through the drills before start of play on Day 5 #TeamIndia #AUSvIND pic.twitter.com/ij4BjL1Buz
— BCCI (@BCCI) December 18, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv