ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಕೊನೆ ಕ್ಷಣದಲ್ಲಿ ಸ್ಥಾನ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದರು. ಇದನ್ನೂ ಓದಿ: ನಾನು ಫುಟ್ಬಾಲ್ ಆಡೋನಲ್ಲ, ಚೆಸ್ ಆಡಿ ಚೆಕ್ ಕೊಡುವವನು: ಹೈಕಮಾಂಡ್‍ಗೆ ಡಿಕೆಶಿ ಟಾಂಗ್
ಪ್ರಮಾಣ ವಚನಕ್ಕೂ ಮುನ್ನ ಶಾಸಕರು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಚರ್ಚೆ ನಡೆಸಿದ್ದಾರೆ. ಎಲ್ಲ ಶಾಸಕರು, ಸಂಸದರು ಮತ್ತು ಪರಮೇಶ್ವರನ್ನು ಸಹ ಕಳುಹಿಸಿ ಡಿ.ಕೆ.ಶಿವಕುಮಾರ್ ಜೊತೆ ಹೈಕಮಾಂಡ್ ಪ್ರತ್ಯೇಕ ಚರ್ಚೆ ನಡೆಸಿದೆ. ಈ ವೇಳೆ ಇದು ಸಮ್ಮಿಶ್ರ ಸರ್ಕಾರದ ಅಳಿವು- ಉಳಿವಿನ ಪ್ರಶ್ನೆ, ಯಾರೆಲ್ಲ ಶಾಸಕರು ಪಕ್ಷಾಂತರ ಮಾಡಬಹುದು ಅನ್ನೋ ವಿಚಾರದ ರಾಹುಲ್ ಮತ್ತು ಸೋನಿಯಾ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಭಾವನಾತ್ಮಕ ಭರವಸೆ ಈಡೇರಿಸಲು ಅಸಾಧ್ಯ – ಎಚ್‍ಡಿಕೆ ಸಾಲ ಮನ್ನಾ ಭರವಸೆಗೆ ಡಿಕೆಶಿ ಪರೋಕ್ಷ ಟಾಂಗ್!
Advertisement
ಈ ವೇಳೆ ಡಿ.ಕೆ.ಶಿವಕುಮಾರ್, ಪಕ್ಷ ನೀಡಿದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದೇನೆ. ಪ್ರತಿ ಬಾರಿಯೂ ನನಗೆ ದ್ರೋಹವಾಗ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ನೀವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದೀರಿ, ಕಾಂಗ್ರೆಸ್ ನಿಮ್ಮನ್ನ ಕಡೆಗಣಿಸೋ ಮಾತೇ ಇಲ್ಲ ಅಂತಾ ಹೈಕಮಾಂಡ್ ಭರವಸೆ ನೀಡಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.