ಹೈದರಾಬಾದ್: ‘ವೈಟ್ ಚಾಲೆಂಜ್’ ಸ್ವೀಕರಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸವಾಲು ಹಾಕುವ ಪೋಸ್ಟರ್‌ಗಳನ್ನು ತೆಲಂಗಾಣದಲ್ಲಿ ಹಾಕಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಎ.ರೇವಂತ್ ರೆಡ್ಡಿ ರಾಜಕಾರಣಿಗಳನ್ನು ‘ವೈಟ್ ಚಾಲೆಂಜ್’ ಸ್ವೀಕರಿಸುವಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ನಾಯಕ ಕ್ರಿಶನ್, ಈ ಪರೀಕ್ಷೆಯನ್ನು ಗಾಂಧಿ ವಂಶಸ್ಥರೂ ತೆಗೆದುಕೊಳ್ಳಲಿ. ಈ ಸವಾಲನ್ನು ರಾಹುಲ್ ಗಾಂಧಿ ಏಕೆ ಸ್ವೀಕರಿಸುವುದಿಲ್ಲ ಎಂದು ಪ್ರಶ್ನೆಯನ್ನು ಕೇಳಿದರು. ಇದನ್ನೂ ಓದಿ: ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್
Advertisement
Advertisement
ರೆಡ್ಡಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಹಾವಳಿ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ವೈಟ್ ಚಾಲೆಂಜ್’ ಆರಂಭಿಸಿದ್ದಾರೆ. ಪರಿಣಾಮ ಈ ಸವಾಲನ್ನು ಮಾಜಿ ಸಂಸದ ಕೆ.ವಿಶೇಶ್ವರ್ ರೆಡ್ಡಿ ಅವರು ಸ್ವೀಕರಿಸಿದ್ದಾರೆ. ರಾಮರಾವ್ ಅವರು ಸಹ ಈ ಸವಾಲನ್ನು ಸ್ವೀಕರಿಸಲು ಧೈರ್ಯ ಮಾಡಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿದ್ದರು. ಕೆ.ಟಿ.ರಾಮರಾವ್ ಅವರು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಪುತ್ರ.
Advertisement
ಡ್ರಗ್ಸ್ ದಂಧೆಯಲ್ಲಿ ಕೆಟಿಆರ್‌ಗೆ ನಂಟು ಇದೆ ಎಂದು ರೇವಂತ್ ರೆಡ್ಡಿ ಆರೋಪ ಮಾಡಿದ್ದರು. ರೆಡ್ಡಿ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆಟಿಆರ್, ನನಗೆ ಈ ಡ್ರಗ್ಸ್ ಪ್ರಕರಣ ಹೇಗೆ ಸಂಪರ್ಕವಿದೆ. ನಾನು ರಕ್ತ, ಕೂದಲು ಮತ್ತು ಯಕೃತ್ತಿನ ಪರೀಕ್ಷೆ ಮಾಡಿಸಿಕೊಳ್ಳಲು ಸಿದ್ಧ. ರಾಹುಲ್ ಗಾಂಧಿ ಅವರು ಸಹ ಪರೀಕ್ಷೆ ಮಾಡಿಸಿಕೊಳ್ಳುತ್ತಾರಾ ಎಂದು ಮರು ಪ್ರಶ್ನೆಯನ್ನು ಕೇಳಿದರು. ಪ್ರಸ್ತುತ ರಾಹುಲ್ ಗಾಂಧಿ ‘ವೈಟ್ ಚಾಲೆಂಜ್’ ತೆಗೆದುಕೊಳ್ಳಿ ಎಂಬ ಪೋಸ್ಟರ್ ತೆಲಂಗಾಣದಲ್ಲಿ ಹರಿದಾಡುತ್ತದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಕಠ್ಮಂಡುವಿನ ನೈಟ್‍ಕ್ಲಬ್‍ನಲ್ಲಿ ರಾಹುಲ್ ಗಾಂಧಿ ಫೋಟೋ ವೈರಲ್ ಆಗಿದ್ದು, ವೀಡಿಯೋದಲ್ಲಿ ರಾಹುಲ್ ಅವರು ಕಾಣಿಸಿಕೊಂಡ ನಂತರ ಟಿಆರ್‍ಎಸ್ ‘ವೈಟ್ ಚಾಲೆಂಜ್’ ತೆಗೆದುಕೊಳ್ಳುವಂತೆ ಆಗ್ರಹ ಮಾಡುತ್ತಿವೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಮಾತಿನ ಸಮರ ಉಂಟು ಮಾಡುವಂತೆ ಮಾಡಿದೆ. ಇದನ್ನೂ ಓದಿ: ಅರಗ ಜ್ಞಾನೇಂದ್ರ, ಅಶ್ವತ್ಥ ನಾರಾಯಣ್ ಮೇಲಿನ ಆರೋಪಕ್ಕೆ ಹುರುಳು, ತಿರುಳು ಇಲ್ಲ: ಆರ್.ಅಶೋಕ್
ಬಿಜೆಪಿಯ ಅಮಿತ್ ಮಾಳವೀಯ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಈ ವೀಡಿಯೋವನ್ನು ಟ್ವೀಟ್ ಮಾಡಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಖಾಸಗಿ ವಿವಾಹ ಕಾರ್ಯಕ್ರಮಕ್ಕಾಗಿ ನೇಪಾಳಕ್ಕೆ ಭೇಟಿ ನೀಡಿದ್ದರು ಎಂದು ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.