ನವದೆಹಲಿ: ಅಂಬಾನಿ, ಅದಾನಿ ಹೆಸರು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರು ಟಾಂಗ್ ನೀಡಿದ್ದಕ್ಕೆ ಇದೀಗ ಕೈ ನಾಯಕ ರಾಹುಲ್ ಗಾಂಧಿ (Rahul Gandhi) ತಿರುಗೇಟು ಕೊಟ್ಟಿದ್ದಾರೆ.
ಈ ಸಂಬಂಧ ವೀಡಿಯೋ ಮಾಡಿದ ರಾಗಾ, ನಮಸ್ಕಾರ ಮೋದಿ ಅವರೇ, ಏನು ಭಯಗೊಂಡಿದ್ದೀರಾ..?. ಸಾಮಾನ್ಯವಾಗಿ ನೀವು ಮುಚ್ಚಿದ ಕೋಣೆಯಲ್ಲಿ ಅಂಬಾನಿ (Mukesh Ambani), ಅದಾನಿ (Adani) ಬಗ್ಗೆ ನೀವು ಮಾತನಾಡುತ್ತೀರಿ. ಆದರೆ ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದೀರಿ. ಅವರು ಟೆಂಪೋದಲ್ಲಿ ಹಣ ಕೊಡ್ತಾರೆ ಅಂತಾ ನಿಮಗೆ ಗೊತ್ತು. ಇದು ನಿಮ್ಮ ವೈಯಕ್ತಿಕ ಅನುಭವನಾ ಎಂದು ಪ್ರಶ್ನಿಸಿದ್ದಾರೆ.
भाजपा के भ्रष्टाचार के टेम्पो का ‘ड्राइवर’ और ‘खलासी’ कौन है, देश जानता है। pic.twitter.com/62N5IkhHWk
— Rahul Gandhi (@RahulGandhi) May 8, 2024
ಸಿಬಿಐ, ಇಡಿ ಕಳುಹಿಸಿ ಸಾಧ್ಯವಾದಷ್ಟು ಬೇಗ ವಿಚಾರಣೆ ನಡೆಸಿ ಹೆದರಿಕೊಳ್ಳಬೇಡಿ. ನಾನು ಮತ್ತೆ ಹೇಳುತ್ತೇನೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಅಂಬಾನಿ, ಅದಾನಿಗೆ ನೀಡಿದ್ದಾರೆ. ಅಷ್ಟೇ ಹಣವನ್ನು ನಾನು ಭಾರತದ ಬಡವರಿಗೆ ನೀಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಈ ಚುನಾವಣೆಯಲ್ಲಿ ಅದಾನಿ-ಅಂಬಾನಿಯನ್ನು ನಿಂದಿಸುತ್ತಿಲ್ಲ ಯಾಕೆ – ರಾಹುಲ್‌ಗೆ ಮೋದಿ ಪ್ರಶ್ನೆ
ಮಹಾಲಕ್ಷ್ಮಿ, ಮೊದಲ ಉದ್ಯೋಗ ಯೋಜನೆ ಮೂಲಕ ಕೋಟ್ಯಂತರ ಜನರನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತೇವೆ. ಮೋದಿ ಅವರು 22 ಜನರನ್ನು ಕೊಟ್ಯಾಧಿಪತಿ ಮಾಡಿದ್ದಾರೆ. ಆದರೆ ನಾವು ಕೋಟ್ಯಾಂತರ ಜನರನ್ನು ಲಕ್ಷಾಧಿಪತಿ ಮಾಡಲಿದ್ದೇವೆ ಎಂದು ರಾಹುಲ್ ಗಾಂಧಿ ಭರವಸೆ ಕೊಟ್ಟರು.
ಮೋದಿ ಹೇಳಿದ್ದೇನು..?; ತೆಲಂಗಾಣದ ಕರೀಂಪುರದಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಐದು ವರ್ಷಗಳಿಂದ ಕಾಂಗ್ರೆಸ್‌ನ ಶೆಹಜಾದ (ರಾಹುಲ್ ಗಾಂಧಿ) ಒಂದು ಮಾತನ್ನು ಜಪಿಸುತ್ತಲೇ ಇದ್ದರು. ಅವರ ರಫೇಲ್ ವಿವಾದದ ನಂತರ ಅವರು ಹೊಸ ಜಪವನ್ನು ಪ್ರಾರಂಭಿಸಿದರು. ಹೋದಲ್ಲಿ ಬಂದಲ್ಲಿ ಐದು ಕೈಗಾರಿಕೋದ್ಯಮಿಗಳು, ಐದು ಕೈಗಾರಿಕೋದ್ಯಮಿಗಳು ಎಂದು ಹೇಳುತ್ತಿದ್ದರು. ನಂತರ ಅವರು ಅಂಬಾನಿ-ಅದಾನಿ ಎಂದು ಹೇಳಲು ಪ್ರಾರಂಭಿಸಿದರು. ಆದರೆ ಚುನಾವಣೆ ಘೋಷಣೆಯಾದಾಗಿನಿಂದ ಅವರು ಅಂಬಾನಿ ಮತ್ತು ಅದಾನಿಯನ್ನು ನಿಂದಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ್ದರು.