ಬೆಂಗಳೂರು: ಸಂಪುಟ ರಚನೆಯ ಬಳಿಕ ಪಕ್ಷದ ಕೆಲ ಶಾಸಕರು ಬಂಡಾಯ ಏಳುವ ಸಾಧ್ಯತೆಗಳಿವೆ ಎಂದು ಗುಪ್ತಚರ ತನ್ನ ವರದಿಯನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಪುಟ ರಚನೆಗೆ ಎರಡು ದಿನಗಳ ಗಡುವು ನೀಡಿ ರಾಜ್ಯ ನಾಯಕರ ಮುಂದೆ ದ್ವಿ ಸೂತ್ರ ಇಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.
ಪ್ಲಾನ್ ಎ ಅಥವಾ ಪ್ಲಾನ್ ಬಿ ಪ್ರಕಾರ ಸಂಪುಟ ರಚನೆ ಮಾಡಲು ರಾಹುಲ್ ಗಾಂಧಿ ಆದೇಶಿಸಿದ್ದಾರೆ. ಸಂಪುಟ ರಚನೆಯ ಜವಾಬ್ದಾರಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.
Advertisement
ಪ್ಲಾನ್ 1: ಮೊದಲಿಗೆ 5-6 ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವುದು. ನಂತರ ಕಿರಿಯ ಶಾಸಕರಿಗೆ ಉಳಿದ ಸ್ಥಾನಗಳನ್ನು ನೀಡುವುದು. ಉಳಿದ ಶಾಸಕರನ್ನು ಮತ್ತು ಮುಖಂಡರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವುದು.
Advertisement
Advertisement
ಪ್ಲಾನ್ 2: ಸದ್ಯ ಹಾಗು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಹಿರಿಯ ಶಾಸಕರಿಗೆ ಮಣೆ ಹಾಕುವುದು. ಈ ಹಿನ್ನೆಲೆಯಲ್ಲಿ ಹಿರಿಯ ಸಚಿವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದು. ಕೊನೆಗೆ ಉಳಿದ ಕಿರಿಯ ಶಾಸಕರಿಗೆ ಪಕ್ಷ ಸಂಘಟನೆಯ ಹೊಣೆ ನೀಡುವುದು. ಇದನ್ನೂ ಓದಿ: ಸಂಪುಟ ವಿಸ್ತರಣೆ ಬಳಿಕ ಶುರುವಾಗಲಿದೆ ಮತ್ತೊಂದು ಕದನ: ಸರ್ಕಾರಕ್ಕೆ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ- ಬಂಡಾಯ ಏಳುವ 8 ಕಾಂಗ್ರೆಸ್ ಶಾಸಕರು ಯಾರು..?
Advertisement
ಸಂಪುಟ ವಿಸ್ತರಣೆ ಆದ ಕೂಡಲೇ 8 ಕಾಂಗ್ರೆಸ್ ಶಾಸಕರು ಬಂಡಾಯ ಏಳುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ. ಈಗಾಗಲೇ ಶಾಸಕರು ನಾವು ಸಚಿವ ಸ್ಥಾನದ ಆಕಾಂಕ್ಷಿ ಅಂತಾ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಇತ್ತ ಗುಪ್ತಚರ ವರದಿಯಲ್ಲಿ ಹೇಳಿರುವ ಶಾಸಕರು ಬಂಡಾಯ ಏಳದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.