ಚೆನ್ನೈ: ಕಾಂಗ್ರೆಸ್ ಸಂಸದರೂ ಆಗಿರುವ ವಯನಾಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ (Rahul Gandhi’s Helicopter) ಅನ್ನು ಚುನಾವಣಾ ಅಧಿಕಾರಿಗಳು ಇಂದು (ಸೋಮವಾರ) ತಪಾಸಣೆ ನಡೆಸಿದ್ದಾರೆ.
ಚುಣಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದ ವೇಳೆ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ (ಇಸಿಐ) ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು (Election Commission’s Flying Squad officials) ರಾಗಾ ಅವರ ಹೆಲಿಕಾಪ್ಟರ್ ಅನ್ನು ತಪಾಸಣೆ ನಡೆಸಿದರು. ಇದನ್ನೂ ಓದಿ: 70 ವರ್ಷ ಮೇಲ್ಪಟ್ಟ ಎಲ್ಲರೂ ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಸೇರ್ಪಡೆ – ಬಿಜೆಪಿ ಭರವಸೆಗಳೇನು?
Advertisement
#WATCH | The Helicopter through which Congress leader Rahul Gandhi arrived in Nilgiris, Tamil Nadu was checked by the Election Commission’s Flying Squad officials in Nilgiris.
(Video source: Election Commission Flying Squad) pic.twitter.com/aSOoNxyUJB
— ANI (@ANI) April 15, 2024
Advertisement
ಅಧಿಕಾರಿಗಳ ತಪಾಸಣೆಗೆ ಸಹಕರಿಸಿದ ರಾಹುಲ್ ಗಾಂಧಿ, ಬಳಿಕ ತಮ್ಮ ಸಂಸದೀಯ ಕ್ಷೇತ್ರ ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ಬೃಹತ್ ರೋಡ್ ಶೋ (Rahul Gandhi Road Show) ನಡೆಸಿದರು. ಇದಕ್ಕೂ ಮುನ್ನ ನೀಲಗಿರಿ ಜಿಲ್ಲೆಯಲ್ಲಿನ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿಯೂ ಪಾಲ್ಗೊಂಡರು.
Advertisement
ಬಿಜೆಪಿ ಪ್ರಣಾಳಿಕೆ ವಿರುದ್ಧ ವಾಗ್ದಾಳಿ:
ಒಂದು ದಿನದ ಹಿಂದೆಯಷ್ಟೇ ರಾಹುಲ್ ಗಾಂಧಿ ಬಿಜೆಪಿ ಪ್ರಣಾಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಪಕ್ಷವು ಪ್ರಣಾಳಿಕೆಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರವನ್ನು ನಿರ್ಲಕ್ಷಿಸಿದೆ. ಪ್ರಣಾಳಿಕೆ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಣದುಬ್ಬರ ಮತ್ತು ನಿರುದ್ಯೋಗ ಬಿಜೆಪಿಯ ಪ್ರಣಾಳಿಕೆಯಿಂದ ಕಾಣೆಯಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ
Advertisement
ಜನರ ಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಚರ್ಚಿಸಲು ಸಹ ಬಿಜೆಪಿ ಬಯಸುವುದಿಲ್ಲ. ಆದರೆ ಈ ಬಾರಿ ಯುವಕರು ಪ್ರಧಾನಿ ಮೋದಿಯವರ ಬಲೆಗೆ ಬೀಳುವುದಿಲ್ಲ. ಅವರು ಈಗ ಕಾಂಗ್ರೆಸ್‌ನ ಕೈಗಳನ್ನು ಬಲಪಡಿಸುತ್ತಾರೆ ಮತ್ತು ದೇಶದಲ್ಲಿ ‘ಉದ್ಯೋಗ ಕ್ರಾಂತಿ’ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.