ನವದೆಹಲಿ: ಕಾಂಗ್ರೆಸ್‍ನ ಬಹು ನಿರೀಕ್ಷಿತ ಭಾರತ್ ಜೋಡೋ ಯಾತ್ರೆಯ ಏಳನೇ ದಿನದ ಪಾದಯಾತ್ರೆ ಆರಂಭವಾಗಿದ್ದು, ಇಂದು 100 ಕಿಲೋ ಮೀಟರ್ ಹಾದಿಯನ್ನು ಯಾತ್ರೆ ಕ್ರಮಿಸಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಹೊರಟಿರುವ ಯಾತ್ರೆ ಕೇರಳದ ಕಣಿಯಾಪುರಂ ತಲುಪಿದೆ.
Congress’ Bharat Jodo Yatra enters 7th day
Read @ANI Story | https://t.co/H6rvNbnc07#Congress #BharatJodoYatra #RahulGandhi #LoksabhaElection2024 pic.twitter.com/WBQmDYLxvs
— ANI Digital (@ani_digital) September 13, 2022
Advertisement
ಇಂದು ಕಣಿಯಾಪುರಂನಿಂದ ಪಾದಯಾತ್ರೆ ಹೊರಟಿದ್ದು, ಮುಂದಿನ 17 ದಿನಗಳ ಕಾಲ ಕೇರಳದ ಬೇರೆ ಬೇರೆ ನಗರಗಳ ಮೂಲಕ ಯಾತ್ರೆ ಸಾಗಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತದ ಕನಸು ಭಗ್ನಗೊಂಡಿದೆ, ಚದುರಿಹೋಗಿಲ್ಲ. ಕನಸನ್ನು ನನಸಾಗಿಸಲು ನಾವು ಭಾರತವನ್ನು ಸಂಪರ್ಕಿಸುತ್ತಿದ್ದೇವೆ. 100 ಕಿಮೀ ಮುಗಿದಿದೆ, ನಾವು ಈಗಷ್ಟೇ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಇಲಾಖೆಯಲ್ಲಿ ಕಳ್ಳ ಅಧಿಕಾರಿಗಳಿದ್ದಾರೆ; ಅವರಿಗೆ ನಾನೇ ಸರ್ದಾರ – ಬಿಹಾರ ಸಚಿವ
Advertisement
भारत का सपना टूटा है, बिखरा नहीं है।
उसी सपने को जोड़ने के लिए, भारत जोड़ रहे हैं।
100 kms done
And, we have just begun???????? pic.twitter.com/o12y17Xtdf
— Rahul Gandhi (@RahulGandhi) September 12, 2022
Advertisement
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಲೋಮೀಟರ್ ಮೆರವಣಿಗೆಯು 150 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯಾತ್ರೆ 12 ರಾಜ್ಯಗಳಲ್ಲಿ ಸಂಚರಿಸಲಿದೆ. ಸದ್ಯ ಕೇರಳದಲ್ಲಿರುವ ಯಾತ್ರೆ, ಮುಂದಿನ 18 ದಿನಗಳ ಕಾಲ ಸಂಚರಿಸಲಿದ್ದು, ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಇದನ್ನೂ ಓದಿ: ಎರಡನೇ ಬಾರಿಗೆ ಅಟಾರ್ನಿ ಜನರಲ್ ಆಗಿ ಮುಕುಲ್ ರೊಹಟಗಿ ಆಯ್ಕೆ
Advertisement
ನಿನ್ನೆ ಭಾರತ್ ಜೋಡೋ ಯಾತ್ರೆ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಆರ್‌ಎಸ್‍ಎಸ್ ಪ್ರತಿಬಿಂಬಿಸುವ ಖಾಕಿ ಚಡ್ಡಿಗೆ ಬೆಂಕಿ ಹತ್ತಿರುವ ಫೋಟೋ ಪೋಸ್ಟ್ ಮಾಡಿತ್ತು. ಈ ಪೋಸ್ಟ್‌ಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ರಿ ಟ್ವೀಟ್ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯಾ ಕಾಂಗ್ರೆಸ್ ಈ ಹಿಂದೆ ಹೊತ್ತಿಸಿದ ಬೆಂಕಿಯು ದೇಶದಲ್ಲಿ ಅವರ ರಾಜಕೀಯ ಭವಿಷ್ಯವನ್ನು ಸುಟ್ಟುಹಾಕಿದೆ ಎಂದು ವ್ಯಂಗ್ಯವಾಡಿದ್ದರು.