LatestMain PostNational

ಎರಡನೇ ಬಾರಿಗೆ ಅಟಾರ್ನಿ ಜನರಲ್ ಆಗಿ ಮುಕುಲ್ ರೊಹಟಗಿ ಆಯ್ಕೆ

ನವದೆಹಲಿ: ಸೆಪ್ಟೆಂಬರ್ 30ಕ್ಕೆ ಹಾಲಿ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ (KK Venugopal ) ಅವಧಿ ಅಂತ್ಯ ಹಿನ್ನೆಲೆ ಹಿರಿಯ ವಕೀಲ ಮುಕುಲ್ ರೋಹಟಗಿ(Mukul Rohatgi) ಅವರನ್ನು ಭಾರತದ ಹದಿನಾಲ್ಕನೇ ಅಟಾರ್ನಿ ಜನರಲ್ ಆಗಿ ನೇಮಕಗೊಳಿಸಲು ನಿರ್ಧರಿಸಲಾಗಿದೆ.

ಮುಕುಲ್ ರೊಹಟಗಿ ಎರಡನೇ ಬಾರಿಗೆ ಅಟಾರ್ನಿ ಜನರಲ್(Attorney General) ಹುದ್ದೆ ಅಲಂಕರಿಸುತ್ತಿದ್ದು, ಈ ಹಿಂದೆ ಜೂನ್ 2014 ರಿಂದ ಜೂನ್ 2017ರ ಅವಧಿಯಲ್ಲಿ ಮೊದಲ ಬಾರಿಗೆ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಮದ್ಯಪಾನ ತಡೆ ನೀತಿ ಜಾರಿಗೆ ತರಲು ಮನವಿ – ಈ ವಿಷಯವನ್ನು ಮುಟ್ಟುವುದಿಲ್ಲ ಎಂದ ಸುಪ್ರೀಂಕೋರ್ಟ್

ಕಳೆದ ಜೂನ್ ಅಂತ್ಯಕ್ಕೆ ಕೆ.ಕೆ ವೇಣುಗೋಪಾಲ್ ಅಧಿಕಾರಾವಧಿ ಅಂತ್ಯವಾಗಿತ್ತು. ಸರ್ಕಾರ ಮೂರು ತಿಂಗಳ ಅವಧಿಗೆ ಅವರ ಸೇವೆಯನ್ನು ವಿಸ್ತರಿಸಲಾಗಿತ್ತು. ಈ ವಿಸ್ತರಣೆಯು ಸೆಪ್ಟೆಂಬರ್ 30 ರಂದು ಅಂತ್ಯಗೊಳ್ಳಲಿದೆ. ಈ ಹಿಂದೆ ಕೆ.ಕೆ ವೇಣುಗೋಪಾಲ್ ಅವರನ್ನು ಮೂರು ವರ್ಷಗಳ ಅವಧಿಗೆ ಅಟಾರ್ನಿ ಜನರಲ್ ಆಗಿ ನೇಮಿಸಲಾಯಿತ್ತು. ನಂತರ ಅವರ ಎರಡು ಬಾರಿ ಅವಧಿಯನ್ನು ವಿಸ್ತರಿಸಲಾಗಿತ್ತು. ಇದನ್ನೂ ಓದಿ: ವಾಹನದಲ್ಲಿ ಕುಳಿತಿದ್ದ ಪೊಲೀಸರ ಮುಂದೆಯೇ ಕಳ್ಳತನ- ಖದೀಮನಿಗೆ ಜನ ಗೂಸಾ ಕೊಟ್ರೂ ಡೋಂಟ್‍ಕೇರ್!

Live Tv

Leave a Reply

Your email address will not be published.

Back to top button