ನವದೆಹಲಿ: ಇಬ್ಬರು ಸಂಸದರ ವಿರುದ್ಧ ನ್ಯಾಯಾಲಯಕ್ಕೆ ನೀಡಿದ್ದ ಜೀವ ಬೆದರಿಕೆ ದೂರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಹಿಂದಕ್ಕೆ ಪಡೆದಿದ್ದಾರೆ.
ರಾಹುಲ್ ಒಪ್ಪಿಗೆ ಇಲ್ಲದೆ ಕೋರ್ಟ್‌ನಲ್ಲಿ ಜೀವ ಬೆದರಿಕೆ ದೂರನ್ನು ದಾಖಲಿಸಲಾಗಿದೆ. ನಾಳೆ ಈ ದೂರನ್ನು ವಕೀಲರು ಹಿಂದಕ್ಕೆ ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಸುಪ್ರಿಯಾ ಶ್ರೀನಾಥೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ಕೇಸ್ – ಹೊಸ ತ್ರಿಸದಸ್ಯ ಪೀಠ ರಚಿಸಿದ ಸಿಜೆಐ ಗವಾಯಿ
Shri Rahul Gandhi’s lawyer had filed a written statement (pursis) in the court citing threat to his life without Rahul ji’s consent.
Rahul Gandhi strongly disagrees with this.
The lawyer will withdraw this written statement from the court tomorrow.
Here is the statement👇 pic.twitter.com/rofriCyHO8
— Supriya Shrinate (@SupriyaShrinate) August 13, 2025
ಏನಿದು ದೂರು?
ವೀರ್ ಸಾವರ್ಕರ್ ಅವರ ಸಂಬಂಧಿಯೊಬ್ಬರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯಲ್ಲಿ ರಾಹುಲ್ ಗಾಂಧಿ ಅವರ ವಕೀಲ ಮಿಲಿಂದ್ ಪವಾರ್ ಜೀವಬೆದರಿಕೆ ಸಂಬಂಧ ಪುಣೆ ಕೋರ್ಟ್‌ನಲ್ಲಿ ದೂರು ನೀಡಿದ್ದರು. ಇದನ್ನೂ ಓದಿ: ನಾಳೆ ದರ್ಶನ್ ಪಾಲಿಗೆ ಬಿಗ್ ಡೇ – ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?
ಕಳೆದ 15 ದಿನಗಳಿಂದ ರಾಹುಲ್ ಗಾಂಧಿ ಚುನಾವಣಾ ಆಯೋಗದ (Election commission) ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಸಂಸದರು ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ದಾರೆ. ರವನೀತ್ ಸಿಂಗ್ ಬಿಟ್ಟು, ರಾಹುಲ್ ಗಾಂಧಿ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಸಾರ್ವಜನಿಕವಾಗಿ ಕರೆದಿದ್ದಾರೆ. ಬಿಜೆಪಿ ನಾಯಕ ತರವಿಂದರ್ ಸಿಂಗ್ ಮಾರ್ವಾ ಅವರು, ನಿಮ್ಮ ಅಜ್ಜಿಯಂತೆಯೇ ನಿಮಗೂ ಗತಿಯಾಗುತ್ತದೆ ಎಂದು ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ದಾರೆ. ಈ ಕಾರಣಕ್ಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದರು.
#WATCH | Pune, Maharashtra: On the hearing in the defamation case filed by a relative of Veer Savarkar, Lok Sabha LoP and Congress MP Rahul Gandhi’s lawyer Milind Pawar says, “…For the last 15 days, Rahul Gandhi has raised his voice against the Election Commission, which is… pic.twitter.com/jkVHDJ7GT3
— ANI (@ANI) August 13, 2025