ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವಿಮಾನದ ಎಂಜಿನ್‍ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಗೆ ಮರಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಬಿಹಾರ, ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಬೇಕಿತ್ತು. ಆದರೆ ಪಾಟ್ನಾಕ್ಕೆ ಬರುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಪರಿಣಾಮ ಸಭೆಗೆ ಬರುವುದು ತಡವಾಗುತ್ತದೆ. ಈ ಅನಾನುಕೂಲತೆಗಾಗಿ ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಟ್ವೀಟ್ ನಲ್ಲಿ ಏನಿದೆ?:
ಪಾಟ್ನಾದಲ್ಲಿ ವಿಮಾನದ ಇಂಜಿನ್ ನಲ್ಲಿ ದೋಷ ಕಂಡುಬಂದಿದೆ. ಹೀಗಾಗಿ ನಾವು ದೆಹಲಿಗೆ ಮರಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಸಮಸ್ತಿಪುರ್ (ಬಿಹಾರ), ಬಾಲಸೋರ್ (ಒಡಿಶಾ) ಮತ್ತು ಸಂಗಮನರ್ (ಮಹಾರಾಷ್ಟ್ರ) ಪ್ರಚಾರ ಸಭೆಗೆ ಬರುವುದು ತಡವಾಗುತ್ತದೆ. ಈ ಅನಾನುಕೂಲತೆಗಾಗಿ ನಮ್ಮನ್ನು ಕ್ಷಮಿಸಿ ಎಂದು ಹೇಳಿ ವಿಮಾನ ಎಂಜಿನ್ ವಿಡಿಯೋವನ್ನು ಪ್ರಕಟಿಸಿದ್ದಾರೆ.
Advertisement
ರಾಹುಲ್ ಟ್ವೀಟ್ ಮಾಡಿದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ತನಿಖೆ ಆರಂಭಿಸಿದೆ.
Advertisement
ಕಳೆದ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡಲು ಬರುತ್ತಿದ್ದ ರಾಹುಲ್ ಗಾಂಧಿ ಅವರ ವಿಮಾನ ಈ ರೀತಿಯಲ್ಲೇ ತೊಂದರೆಗೀಡಾಗಿತ್ತು. ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು 40 ನಿಮಿಷ ವಿಮಾನ ಮೇಲೆ ಹಾರಿರಲಿಲ್ಲ.
Engine trouble on our flight to Patna today! We’ve been forced to return to Delhi. Today’s meetings in Samastipur (Bihar), Balasore (Orissa) & Sangamner (Maharashta) will run late. Apologies for the inconvenience. pic.twitter.com/jfLLjYAgcO
— Rahul Gandhi (@RahulGandhi) April 26, 2019