ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ

Advertisements

ಹೈದರಾಬಾದ್: ತೆಲಂಗಾಣದ (Telangana) ಧರ್ಮಪುರದಿಂದ ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ಪುನಾರಂಭಿಸಿದ ನಂತರ ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ಬುಡಕಟ್ಟು ಜನಾಂಗದ ಸಾಂಪ್ರದಾಯಿಕವಾಗಿ ನೃತ್ಯದಲ್ಲಿ ಭಾಗವಹಿಸಿದ್ದಾರೆ.

Advertisements

ದೀಪಾವಳಿ (Diwali) ಹಿನ್ನೆಲೆಯಲ್ಲಿ 3 ದಿನಗಳ ಕಾಲ ಭಾರತ್ ಜೋಡೋ ಯಾತ್ರೆಗೆ ವಿರಾಮವನ್ನು ನೀಡಲಾಗಿತ್ತು. ಅದಾದ ನಂತರ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯಿಂದ ತಮ್ಮ ಯಾತ್ರೆಯನ್ನು ಪುನಾರಂಭಿಸಿದ್ದರು. ಈ ವೇಳೆ ಭದ್ರಾಚಲಂನಲ್ಲಿ ಆದಿವಾಸಿಗಳೊಂದಿಗೆ ಕೊಮ್ಮು ಕೋಯಾ ನೃತ್ಯದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಅವರು ಬುಡಕಟ್ಟು ಜನಾಂಗದ ಶಿರಸ್ತ್ರಾಣವನ್ನು ಧರಿಸಿದ್ದರು.

Advertisements

ಈ ವೇಳೆ ಅಲ್ಲಿನ ಸ್ಥಳೀಯ ಕಲಾವಿದರೊಂದಿಗೆ ಧೋಲ್ ನುಡಿಸಿದರು. ಈ ವೇಳೆ ಬುಡಕಟ್ಟು ಜನಾಂಗದವರ ಸ್ಥಳೀಯ ಕಲಾವಿದರೊಂದಿಗೆ ನೃತ್ಯ ಮಾಡಿದ್ದಾರೆ. ರಾಹುಲ್ ಗಾಂಧಿ ಈ ರೀತಿ ಬುಡಕಟ್ಟು ಜನಾಂಗದವರೊಂದಿಗೆ ನೃತ್ಯ ಮಾಡಿರುವುದು ಇದೇ ಮೊದಲಲ್ಲ. 2019ರಲ್ಲಿ ಛತ್ತೀಸ್‍ಗಢದ ರಾಯ್‍ಪುರದಲ್ಲಿ ನಡೆದ ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವದಲ್ಲೂ ನೃತ್ಯ ಮಾಡಿದ್ದರು. ಇದನ್ನೂ ಓದಿ: ಪೂಜೆಗಾಗಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟ – ಹಲವರ ಸ್ಥಿತಿ ಗಂಭೀರ

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 27 ರಂದು 50 ದಿನಗಳನ್ನು ಪೂರೈಸಿದೆ. ಇದನ್ನೂ ಓದಿ: ಕಾರನ್ನು ವೇಗವಾಗಿ ಚಲಿಸುತ್ತಾ ಡಿಕ್ಕಿ ಮೇಲೆ ಪಟಾಕಿ ಸಿಡಿಸಿದ ಕಿಡಿಗೇಡಿಗಳು- ವೀಡಿಯೋ ವೈರಲ್

Advertisements

Live Tv

Advertisements
Exit mobile version