ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಡಿನ ಸಮಸ್ತ ಜನರಿಗೆ 73ನೇ ಗಣರಾಜ್ಯೋತ್ಸವ ಶುಭಾಶಯ ಕೋರಿದ್ದಾರೆ. 1950ರಲ್ಲಿ ಆಚರಿಸಲಾದ ಮೊದಲ ಗಣರಾಜ್ಯೋತ್ಸವ ಸತ್ಯ, ಸಮಾನತೆ ಮೊದಲ ಹೆಜ್ಜೆಯಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: 1950ರಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುವ ಮೂಲಕ ದೇಶ ಸರಿಯಾದ ದಿಕ್ಕಿನಲ್ಲಿ ಮತ್ತು ವಿಶ್ವಾಸದಿಂದ ಮೊದಲ ಹೆಜ್ಜೆ ಇಟ್ಟಿತು. ಅಂತಹ ಸತ್ಯ ಮತ್ತು ಸಮಾನತೆಯ ಮೊದಲ ಹೆಜ್ಜೆಗೆ ನನ್ನ ಪ್ರಣಾಮಗಳು. ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
Advertisement
1950 में गणतंत्र दिवस पर हमारे देश ने विश्वास के साथ सही दिशा में पहला क़दम बढ़ाया था। सत्य और समानता के उस पहले क़दम को नमन।
गणतंत्र दिवस की शुभकामनाएँ।
जय हिंद! pic.twitter.com/EA5ygwjwDD
— Rahul Gandhi (@RahulGandhi) January 26, 2022
Advertisement
50 ವರ್ಷಗಳ ನಂತರ ಇಂಡಿಯಾ ಗೇಟ್‍ನಲ್ಲಿ ನಂದಿಸಲಾದ ಶಾಶ್ವತ ಜ್ಯೋತಿಯ ಚಿತ್ರದೊಂದಿಗೆ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ. ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಅಮರ್ ಜ್ಯೋತಿಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ವಿಲೀನಗೊಳಿಸಿತ್ತು. ಈ ಕ್ರಮವನ್ನು ಕಾಂಗ್ರೆಸ್ ಮತ್ತು ಇತರ ವಿರೋಧಿ ಪಕ್ಷಗಳು ಸೇರಿದಂತೆ ಹಲವರು ಟೀಕಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮ: ಡಾ.ಕೆ.ಸುಧಾಕರ್
Advertisement
Advertisement
ನಮ್ಮ ವೀರ ಯೋಧರಿಗಾಗಿ ಉರಿಯುತ್ತಿದ್ದ ಅಮರ ಜ್ಯೋತಿ ಇಂದು ಆರಿರುವುದು ಅತೀವ ದುಃಖದ ಸಂಗತಿ ಎಂದು ರಾಗುಲ್ ಗಾಧಿ ಈ ಹಿಂದೆ ಟ್ವೀಟ್ ಮಡಿ ಬೇಸರ ವ್ಯಕ್ತಪಡಿಸಿದ್ದರು.