ಬೆಂಗಳೂರು: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕೆಲವರು ನಿಮಗೆ `ಅಧಿಕಾರ ಬೇಕಿಲ್ಲ ಅಂದ ಮೇಲೆ ಯಾಕೆ ಪಾದಯಾತ್ರೆ’ ಎಂದು ರಾಹುಲ್‌ಗಾಂಧಿ (Rahul Gandhi) ಅವರನ್ನ ಪ್ರಶ್ನೆ ಮಾಡಿದ್ರು. ಆದರೆ ರಾಹುಲ್‌ಗಾಂಧಿ ನಮಗೆ ಅಧಿಕಾರ ಬೇಕಿಲ್ಲ ಅಂದ್ರು ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಶಾಕಿಂಗ್ ಹೇಳಿಕೆ ನೀಡಿದ್ದಾರೆ.
Advertisement
ಭಾರತ್ ಜೋಡೋ ಪಾದಯಾತ್ರೆ ಯಶಸ್ಸಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಕೆಲವರು ರಾಹುಲ್‌ಗೆ ಪ್ರಶ್ನೆ ಕೇಳ್ತಿದ್ರು, ನಿಮಗೆ ಅಧಿಕಾರ ಬೇಕಿಲ್ಲ ಅಂದ ಮೇಲೆ ಯಾಕೆ ಪಾದಯಾತ್ರೆ ಎಂದು. ಅದಕ್ಕೆ ರಾಹುಲ್ ಗಾಂಧಿ (Rahul Gandhi) ನಮಗೆ ಅಧಿಕಾರ ಬೇಕಿಲ್ಲ. ನಮ್ಮ ಮನೆಯಲ್ಲಿ ನಾವು, ನಿಮ್ಮ ಮನೆಯಲ್ಲಿ ನೀವು ಖುಷಿ ಯಾಗಿರಬಹುದು. ಆದರೆ ನಾನು ನಮ್ಮ ಅಜ್ಜಿ, ತಂದೆಯನ್ನು ಕಳೆದುಕೊಂಡಿದ್ದೇನೆ. ಆದರೂ ಇಷ್ಟೊಂದು ಜನರ ಪ್ರೀತಿ ಸಿಕ್ಕಿದೆ. ಇಡೀ ದೇಶ ನೆಹರೂ ಅವರ ಕಾಲದಿಂದಲೂ ನಮ್ಮ ಕುಟುಂಬಕ್ಕೆ ಇಷ್ಟೊಂದು ಪ್ರೀತಿ ನೀಡಿದೆ. ಇದು ಮನೆಯಲ್ಲಿದ್ದರೇ ಸಿಗುತ್ತಿತ್ತಾ? ಹಾಗಾಗಿಯೇ ಈ ಪಾದಯಾತ್ರೆ ಮಾಡ್ತಿರೋದು. ಜನರ ಪರವಾಗಿ ನಡೆಯುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ‘ಲೈಗರ್’ ಸಿನಿಮಾ ಸೋಲು: ನಿರ್ದೇಶಕರ ಮನೆ ಮುಂದೆ ಧರಣಿಗೆ ನಿರ್ಧಾರ
Advertisement
Advertisement
ಬದನವಾಳಿನಲ್ಲಿ ದಲಿತರು, ಸವರ್ಣೀಯರ ನಡುವೆ 25 ವರ್ಷಗಳಿಂದ ಘರ್ಷಣೆ ಇತ್ತು. ಅದನ್ನ ಸರಿಮಾಡಿದ್ದು ಭಾರತ್‌ಜೋಡೋ ಪಾದಯಾತ್ರೆ. ಅವರೆಲ್ಲರನ್ನ ಒಂದು ಮಾಡಿದ್ದು ಇದೇ ಪಾದಯಾತ್ರೆ. ಇಂತಹ ಅನೇಕ ಸನ್ನಿವೇಶಗಳಿಗೆ ಯಾತ್ರೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್ ಜನರಿಗೆ ರಿಷಿ ಒಳ್ಳೆಯದು ಮಾಡ್ತಾರೆ ಅನ್ನೋ ವಿಶ್ವಾಸ ಇದೆ: ನಾರಾಯಣಮೂರ್ತಿ
Advertisement
ಭಾರತ್ ಜೋಡೋ ಯಶಸ್ವಿಯಾಗಿದೆ:
ರಾಜ್ಯದಲ್ಲಿ ಭಾರತ್ ಜೊಡೋ ಯಶಸ್ವಿಯಾಗಿದೆ. ರಾಹುಲ್ ನಡಿಗೆ ಜನಸಾಮಾನ್ಯರ ಕಡೆಗೆ ನಡೆದಿತ್ತು. ದೇಶದ ರಾಜಕಾರಣವನ್ನ ಹೊಸದಿಕ್ಕಿಗೆ ಕೊಂಡೊಯ್ದಿದೆ. ಈ ಯಾತ್ರೆಯಲ್ಲಿ ಜನಸಾಗರವೇ ಬೆಂಬಲಿಸಿತ್ತು. ಹಿಂದೆ ನಾವು ಚಿಕ್ಕವರಿದ್ದಾಗ ಇಂದಿರಾ ಗಾಂಧಿ ಅವರನ್ನ ನೊಡೋಲು ನೂಕುನುಗ್ಗಲು ಆಗ್ತಿತ್ತೋ ಅದೇ ರೀತಿ ಉತ್ಸಾಹ ಇದರಲ್ಲೂ ಇತ್ತು. ಚಿಕ್ಕಮಕ್ಕಳೂ ತಮ್ಮ ತಂದೆ-ತಾಯಿಗಳೊಂದಿಗೆ ಇದರಲ್ಲಿ ಭಾಗವಹಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.