ಪುರಿ ಜಗನ್ನಾಥ್ (Puri Jagannath) ನಿರ್ದೇಶನದಲ್ಲಿ ಮೂಡಿ ಬಂದ ಲೈಗರ್(Ligar) ಸಿನಿಮಾ ನಿರ್ಮಾಪಕರಿಗೆ ಮಾತ್ರವಲ್ಲ, ವಿತರಕರಿಗೂ ಭಾರೀ ನಷ್ಟವನ್ನುಂಟು ಮಾಡಿತ್ತು. ಭಾರೀ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾವನ್ನು ಬಿಡುಗಡೆ ಮುಂಚೆಯೇ ಕೆಲ ವಿತರಕರು ಭಾರೀ ಮೊತ್ತಕ್ಕೆ ವಿತರಣಾ ಹಕ್ಕುಗಳನ್ನು ಪಡೆದಿದ್ದರು. ಆದರೆ, ಸಿನಿಮಾ ಗೆಲ್ಲಲೇ ಇಲ್ಲ. ಹೀಗಾಗಿ ವಿತರಕರಿಗೆ ಸಾಕಷ್ಟು ನಷ್ಟವೇ ಆಯಿತು.
Advertisement
ಇದೀಗ ನಷ್ಟ ಮಾಡಿಕೊಂಡ ವಿತರಕರು (Distributor) ಪುರಿ ಜಗನ್ನಾಥ್ ಮನೆಯ ಮುಂದೆ ಧರಣಿ ಕೂರುವುದಾಗಿ ಹೇಳಿದ್ದಾರೆ. ಹಾಗೇನಾದರೂ ಮಾಡಿದರೆ, ಒಂದು ಪೈಸೆ ಕೂಡ ಸಿಗುವುದಿಲ್ಲ ಎಂದು ಪುರಿ ಖಡಕ್ ಸಂದೇಶವನ್ನೇ ರವಾನಿಸಿದ್ದಾರೆ. ‘ನನ್ನ ಬ್ಲ್ಯಾಕ್ ಮೇಲ್ ಮಾಡುವುದಾಗಲಿ, ಹೆದರಿಸುವುದಾಗಲಿ ಮಾಡಿದರೆ ಒಂದು ಪೈಸೆ ಕೂಡ ಸಿಗುವುದಿಲ್ಲ’ ಎಂದು ಪುರಿ ಹೇಳಿದ್ದಾರೆ ಎನ್ನಲಾದ ಆಡಿಯೋ ತೆಲುಗು ಸಿನಿಮಾ ರಂಗದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
Advertisement
Advertisement
ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಮೊದಲ ವಾರವೇ ನೂರು ಕೋಟಿ ಕ್ಲಬ್ ಗೆ ಈ ಸಿನಿಮಾ ಸೇರಲಿದೆ ಎಂದು ಚಿತ್ರದ ನಾಯಕ ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ಇದೊಂದು ಸೂಪರ್ ಹಿಟ್ ಸಿನಿಮಾ ಆಗಲಿದೆ ಎಂದು ಎಲ್ಲ ಕಡೆಯೂ ಹೇಳಿಕೊಂಡು ಬಂದಿದ್ದರು. ಆದರೆ, ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸದ್ದೇ ಮಾಡಲಿಲ್ಲ. ಮೊದಲ ದಿನದಿಂದಲೇ ಮಕಾಡೆ ಮಲಗಿತು.
Advertisement
ಲೈಗರ್ ಸಿನಿಮಾದ ಸೋಲು ಕೇವಲ ನಿರ್ಮಾಪಕರನ್ನು ಮಾತ್ರವಲ್ಲ, ವಿಜಯ್ ದೇವರಕೊಂಡ (Vijay Devarakonda) ಅವರನ್ನು ನಿದ್ದೆಗೆಡಿಸಿತ್ತು. ಸಹ ನಿರ್ಮಾಪಕಿ ಚಾರ್ಮಿ ಕೌರ್ ಕೂಡ ಸೋಲಿನ ನೋವಿನಲ್ಲಿ ಇದ್ದರು. ಇದೀಗ ವಿತರಕರು ಮತ್ತೆ ಚಿತ್ರತಂಡಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ. ತಮಗಾದ ಸೋಲನ್ನು ಕಟ್ಟಿಕೊಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನಿರ್ಮಾಪಕರು ಸ್ಪಂದಿಸದೇ ಇದ್ದರೆ, ಧರಣಿ ಕೂರುವುದಾಗಿಯೂ ಹೇಳಿದ್ದಾರಂತೆ.