ಭೋಪಾಲ್: ಮುಂಬರುವ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ (Madhya Pradesh Assembly Elections) ಗೋಡ್ಸೆಯ ಆರ್‌ಎಸ್‌ಎಸ್, ಬಿಜೆಪಿ ಸಿದ್ಧಾಂತ ಮತ್ತು ಗಾಂಧಿಯ ಕಾಂಗ್ರೆಸ್ ಸಿದ್ಧಾಂತಗಳ ನಡುವಿನ ಹೋರಾಟ ಎಂದು ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿದರು.
ಮಧ್ಯಪ್ರದೇಶದ ಶಾಜಾಪುರದಲ್ಲಿ ಜನಾಕ್ರೋಶ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆ ದ್ವೇಷದ ವಿರುದ್ಧ ಪ್ರೀತಿ ಮತ್ತು ಸಹೋದರತ್ವ ಬೆಸೆಯುವ ಚುನಾವಣೆ ಎಂದು ಹೇಳಿದರು. ಇದನ್ನೂ ಓದಿ: 2000 ರೂ. ನೋಟುಗಳ ವಿನಿಮಯ ಅವಧಿ ಇಂದಿಗೆ ಅಂತ್ಯವಾದರೂ ಬದಲಾಯಿಸಬಹುದು
Advertisement
Advertisement
ಬಿಜೆಪಿ ನಾಯಕರು ಎಲ್ಲಿಗೆ ಹೋದರೂ ದ್ವೇಷವನ್ನೇ ಹರಡುತ್ತಾರೆ. ಆದ್ದರಿಂದ ಮಧ್ಯಪ್ರದೇಶದ ರೈತರು ಮತ್ತು ಯುವಕರು ಅವರನ್ನು ದ್ವೇಷಿಸಲು ಶುರು ಮಾಡಿದ್ದಾರೆ. ಜನರ ನಡುವೆ ಹಂಚಿದ್ದ ದ್ವೇಷವನ್ನು ಅವರು ಮರಳಿ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ಭಾರತ್ ಜೋಡೋ ಯಾತ್ರೆಯಲ್ಲಿ ಮಧ್ಯಪ್ರದೇಶದಲ್ಲಿ ಹಲವಾರು ರೈತರನ್ನು ಭೇಟಿಯಾದೆ, ನಾವು ಮಧ್ಯಪ್ರದೇಶದಲ್ಲಿ 370 ಕಿಮೀ ಪಾದಯಾತ್ರೆ ಮಾಡಿ ರಾಜ್ಯದ ರೈತರು (Farmers), ಮಹಿಳೆಯರು ಮತ್ತು ಯುವಜನರನ್ನ ಭೇಟಿ ಮಾಡಿದೆವು. ಅಲ್ಲಿ ನಮ್ಮೊಂದಿಗೆ ಅವರು ಕೆಲವು ವಿಚಾರಗಳನ್ನ ಹಂಚಿಕೊಂಡರು. ಮಧ್ಯಪ್ರದೇಶದಲ್ಲಿ ಬಿಜೆಪಿ (BJP) ಮಾಡಿರುವ ಭ್ರಷ್ಟಾಚಾರ ದೇಶದ ಯಾವ ರಾಜ್ಯದಲ್ಲೂ ನಡೆದಿಲ್ಲ ಎಂದು ಹೇಳಿಕೊಂಡಿರುವುದಾಗಿ ತಿಳಿಸಿದರು.
Advertisement
ಅಷ್ಟೇ ಅಲ್ಲದೇ ರಾಜ್ಯದಲ್ಲಿ ಕಳೆದ 18 ವರ್ಷಗಳಲ್ಲಿ 18 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಅರ್ಥ ರಾಜ್ಯದಲ್ಲಿ ಪ್ರತಿದಿನ ಮೂವರು ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಮಧ್ಯಪ್ರದೇಶದ ರಾಜ್ಯ ಸರ್ಕಾರ ರೈತರ ಬೆಳೆಗೆ ಸರಿಯಾದ ಬೆಲೆ ನೀಡುತ್ತಿಲ್ಲ. ಹಾಗಾಗಿ ನಾವು ಅಧಿಕಾರಕ್ಕೆ ಬಂದರೆ ಏನು ಭರವಸೆ ನೀಡಿದ್ದೇವೆಯೋ ಅದನ್ನು ಪೂರೈಸುತ್ತೇವೆ. ಈಗಾಗಲೇ ಛತ್ತೀಸ್‌ಗಢದಲ್ಲೂ ನಾವು ನೀಡಿದ್ದ ಭರವಸೆಯನ್ನ ಪೂರೈಸಿದ್ದೇವೆ ಎಂದು ಅವರು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ಹಿಂದೂ ವಿರೋಧಿ ನೀತಿಯಿಂದ್ಲೇ ಲಿಂಗಾಯತರ ಕಡೆಗಣನೆ – ಉನ್ನತ ಹುದ್ದೆಯಲ್ಲಿ ಅಲ್ಪ ಸಂಖ್ಯಾತರೇ ಇದ್ದಾರೆ: ಯತ್ನಾಳ್ ಕಿಡಿ
Web Stories