ಚಂಡೀಗಢ: ಕೋವಿಡ್ ಬಗ್ಗೆ ಎಚ್ಚರಿಕೆ ನೀಡಿದಾಗ ನನ್ನನ್ನು ಅಪಹಾಸ್ಯ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸುಳ್ಳು ಭರವಸೆಗಳನ್ನು ನೀಡುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಪಂಜಾಬ್‍ನ ಪಟಿಯಾಲ ಜಿಲ್ಲೆಯ ರಾಜ್‍ಪುರದಲ್ಲಿ ನಡೆದ ನವಿ ಸೋಚ್ ನವ ಪಂಜಾಬ್ ರ‍್ಯಾಲಿಯಲ್ಲಿ ಮಾತನಾಡಿ, ನಾನು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಸಾರ್ವಜನಿಕರು ಸುಳ್ಳು ಭರವಸೆಗಳನ್ನು ನೀಡುವುದನ್ನು ಕೇಳಲು ಬಯಸಿದರೆ, ಮೋದಿ ಮತ್ತು ಕೇಜ್ರಿವಾಲ್ ಮಾತನ್ನು ಕೇಳಿ. ನನಗೆ ಸತ್ಯವನ್ನು ಮಾತ್ರ ಹೇಳಲು ಕಲಿಸಲಾಗಿದೆ. 2014ರ ಮೊದಲು ಪ್ರಧಾನಿಯವರು ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂ. ಪ್ರತಿ ವರ್ಷ ಯುವಕರಿಗೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ಈಗ ಅವರು ಉದ್ಯೋಗ ಅಥವಾ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಈಗ ಬಿಜೆಪಿ ಡ್ರಗ್ಸ್ ಬಗ್ಗೆ ಮಾತ್ರ ಮಾತನಾಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: 7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ
Advertisement
Advertisement
ನಾನು ಕೋವಿಡ್ ಬಗ್ಗೆ ಎಚ್ಚರಿಕೆ ನೀಡಿದಾಗ ನನ್ನನ್ನು ಅಪಹಾಸ್ಯ ಮಾಡಿದರು. 2013ರಲ್ಲಿ ಪಂಜಾಬ್‍ಗೆ ಬಂದೆ ಮತ್ತು ಪಂಜಾಬ್‍ನ ಯುವಕರು ಡ್ರಗ್ಸ್‍ನ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಮತ್ತು ಅಕಾಲಿದಳ ಪಂಜಾಬ್‍ನಲ್ಲಿ ಡ್ರಗ್ಸ್ ಸಮಸ್ಯೆ ಇಲ್ಲ ಎಂದು ನನ್ನನ್ನು ಲೇವಡಿ ಮಾಡಿದರು. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು
Advertisement
ಕಾಂಗ್ರೆಸ್ ಪಕ್ಷವು ಅಕ್ಕಪಕ್ಕದ ರಾಜ್ಯಗಳೊಂದಿಗೆ ಶಾಂತಿ ಕಾಪಾಡಿಕೊಳ್ಳುವ ಶಕ್ತಿ ಹೊಂದಿದೆ ಎಂದರು. ‘ಪಂಜಾಬ್‍ಗೆ ಅತ್ಯಂತ ಮುಖ್ಯವಾಗಿ ಬೇಕಿರುವುದು ಶಾಂತಿ ಮತ್ತು ಸುವ್ಯವಸ್ಥೆ. ಅದನ್ನು ಸ್ಥಿರವಾಗಿ ಕಾಪಾಡುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ. ರಾಜಕೀಯ ಪಕ್ಷಗಳು ಪಂಜಾಬ್ ರಾಜ್ಯವನ್ನು ಪ್ರಯೋಗಶಾಲೆಯಾಗಿ ನೋಡಬಾರದು ಎಂದಿದ್ದಾರೆ.