ಬೆಂಗಳೂರು: ನನ್ನ ತಾಯಿ ಸನ್‍ಸ್ಕ್ರೀನ್ ಕಳುಹಿಸಿದ್ದಾರೆ. ಆದರೆ ನಾನು ಅದನ್ನು ಬಳಸಲ್ಲ ಎಂದು ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ತಿಳಿಸಿದರು.
ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಟ್ಯಾನಿಂಗ್ ಆಗುವುದರಿಂದ ಯಾವ ರೀತಿಯ ಸನ್‍ಸ್ಕ್ರೀನ್ ತಪ್ಪಿಸಿಕೊಳ್ಳುತ್ತೀರಾ ಎಂದು ಸ್ಥಳೀಯರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಸನ್‍ಸ್ಕ್ರೀನ್‍ನ್ನು ಬಳಸುತ್ತಿಲ್ಲ ಎಂದು ತಿಳಿಸಿದರು.
Advertisement
Mr @RahulGandhi :
I don’t use sunscreen…
मेरी माँ ने मेरे लिए Sunscreen भेजी है लेकिन मैं इस्तेमाल नही करता pic.twitter.com/VTNTWHLHiZ
— Supriya Bhardwaj (@Supriya23bh) October 17, 2022
Advertisement
ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಾಹುಲ್ ಗಾಂಧಿ ಬಳಿ ಸ್ಥಳೀಯರೊಬ್ಬರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ನಿಮ್ಮ ಮುಖವು ಸನ್ ಶೈನ್ ಎಂದು ಸ್ಥಳೀಯರೊಬ್ಬರು ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ. ಇದನ್ನೂ ಓದಿ: ನನಗೆ AAP ತೊರೆಯುವಂತೆ ಒತ್ತಡ ಹೇರಿದ್ದಾರೆ – ಸಿಸೋಡಿಯಾ ಆರೋಪ, CBI ಪ್ರತಿಕ್ರಿಯೆ
Advertisement
Advertisement
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಭಾನುವಾರ ಕರ್ನಾಟಕದಲ್ಲಿ ಅಂತ್ಯವಾಗಿದ್ದು, ಇಂದಿನಿಂದ ಆಂಧ್ರ ಪ್ರದೇಶದಲ್ಲಿ ಪ್ರಾರಂಭವಾಗಲಿದೆ. ಸೋಮವಾರ ಕಾಂಗ್ರೆಸ್‍ನ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ವಿರಾಮ ನೀಡಲಾಗಿತ್ತು. ಇದನ್ನೂ ಓದಿ: ಜಮ್ಮು, ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ- ಇಬ್ಬರು ಸ್ಥಳೀಯೇತರ ಕಾರ್ಮಿಕರು ಬಲಿ