ನವದೆಹಲಿ: ನಮ್ಮ ದೇಶದ ಏಕತೆಗೆ ರಾಹುಲ್ ಗಾಂಧಿ (Rahul Gandhi) ಅಪಾಯಕಾರಿ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಅಭಿಪ್ರಾಯಪಟ್ಟಿದ್ದಾರೆ.
Rahul Gandhi Ji will not listen to us but I hope he listens to his devoted well wishers! pic.twitter.com/ghuJ2mqSii
— Kiren Rijiju (@KirenRijiju) March 8, 2023
ಲಂಡನ್‌ನಲ್ಲಿ ರಾಹುಲ್‌ಗಾಂಧಿ ಮಾಡಿರುವ ಭಾಷಣಗಳ ವಿರುದ್ಧ ಕಿರಣ್ ರಿಜಿಜು ಕಿಡಿಕಾರಿದ್ದಾರೆ. ತನ್ನನ್ನು ತಾನು ಕಾಂಗ್ರೆಸ್ ರಾಜಕುಮಾರ ಎಂದು ಹೇಳಿಕೊಳ್ಳುವ ವ್ಯಕ್ತಿ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಅವರು ದೇಶದ ಏಕತೆಗೆ ಅತ್ಯಂತ ಅಪಾಯಕಾರಿಯಾಗಿ ಮಾರ್ಪಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗೆಳತಿಯನ್ನು ಖುಷಿ ಪಡಿಸಲು ಹೋಗಿ ಯಡವಟ್ಟು ಮಾಡಿಕೊಂಡ 41ರ ಗೆಳೆಯ
`ಏಕ್ ಭಾರತ್-ಶ್ರೇಷ್ಠ ಭಾರತ್’ ಎಂಬುದು ಪ್ರಧಾನಿ ಮೋದಿ ನಿನಾದ. ರಾಹುಲ್‌ಗಾಂಧಿ ದೇಶವನ್ನು ವಿಭಜಿಸುವಂತೆ ಜನತೆಗೆ ಕರೆ ನೀಡುತ್ತಿದ್ದಾರೆ ಎಂದು ಕಿರಣ್ ರಿಜಿಜು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಒಂದು ರಹಸ್ಯ ಸಂಘ, ಮುಸ್ಲಿಂ ಬ್ರದರ್‌ಹುಡ್ ರೀತಿಯಲ್ಲಿ ರೂಪಿತವಾಗಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿಗೆ ದೇಶದ ಬಗ್ಗೆ ನಿಯತ್ತು ಇದ್ದಿದ್ರೆ, ವಿದೇಶದಲ್ಲಿ ಭಾರತವನ್ನ ಟೀಕೆ ಮಾಡ್ತಿರಲಿಲ್ಲ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ದೇಶದ್ರೋಹದ ಕೆಲಸ ಮಾಡಿದ್ದಾರೆ. ಅವರು ಈ ಕೂಡಲೇ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.