ಚಂಡೀಗಢ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರೇವರಿಯಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ದೆಹಲಿಗೆ ಲ್ಯಾಂಡ್ ಆಗುವುದನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಮರಳಿ ಹರ್ಯಾಣಕ್ಕೆ ತೆರಳುವಂತೆ ಮರುನಿರ್ದೇಶಿಸಲಾಯಿತು. ಹರ್ಯಾಣದ ಮಹೇಂದ್ರಘಢನಲ್ಲಿ ಚುನಾವಣಾ ರ್ಯಾಲಿ ಮುಗಿಸಿದ ನಂತರ ರಾಹುಲ್ ಗಾಂಧಿ ದೆಹಲಿಗೆ ಮರಳುತ್ತಿದ್ದರು. ಈ ವೇಳೆ ರೇವಾರಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಯಿತು. ನಂತರ ರಸ್ತೆ ಮೂಲಕ ರಾಹುಲ್ ಗಾಂಧಿ ಮರಳಿದರು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
Advertisement
After the public meeting at Mahendragarh, Sh. @RahulGandhi
's chopper could not take off due to bad weather.
Meanwhile while the weather returned to normal, he played gully cricket at Rewari with kids. pic.twitter.com/AQagcYPSFp
— All India Mahila Congress (@MahilaCongress) October 18, 2019
Advertisement
ಇದೇ ವೇಳೆ ರೇವಾರಿಯಲ್ಲಿ ರಾಹುಲ್ ಗಾಂಧಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
Advertisement
ಮಹೇಂದ್ರಘಢನಲ್ಲಿ ನಡೆದ ಸಾರ್ವಜನಿಕ ಸಭೆಯ ನಂತರ ದೆಹಲಿಗೆ ತೆರಳುತ್ತಿದ್ದ ರಾಹುಲ್ ಗಾಂಧಿಯವರ ಹೆಲಿಕಾಪ್ಟರ್ ಹವಾಮಾನ ವೈಪರಿತ್ಯದಿಂದಾಗಿ ಟೇಕ್ ಆಫ್ ಆಗಲಿಲ್ಲ. ಹೀಗಾಗಿ ಹವಾಮಾನವು ಸಾಮಾನ್ಯ ಸ್ಥಿತಿಗೆ ಮರಳುವ ವರೆಗೆ ರಾಹುಲ್ ಅವರು ಮಕ್ಕಳೊಂದಿಗೆ ರೇವಾರಿಯಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ ಎಂಬ ಸಾಲುಗಳನ್ನು ಮಹಿಳಾ ಕಾಂಗ್ರೆಸ್‍ನ ಟ್ವೀಟ್ ನಲ್ಲಿ ಬರೆಯಲಾಗಿದೆ.
Advertisement
https://twitter.com/SalimShehzada3/status/1185233109626699777?
ವಿಡಿಯೋ ಈಗಾಗಲೇ 3,000ಕ್ಕೂ ಹೆಚ್ಚು ವ್ಯೂವ್ ಪಡೆದುಕೊಂಡಿದೆ. 1,500ಕ್ಕೂ ಅಧಿಕ ಲೈಕ್‍ಗಳನ್ನು ಗಳಿಸಿದೆ. ಅಲ್ಲದೆ ಇದಕ್ಕೆ ಹಲವು ಜನ ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದು, ನೀವು ಉತ್ತಮ ನಾಯಕ, ರತ್ನ ಎಂದೆಲ್ಲ ಹಾಡಿ ಹೊಗಳಿದ್ದಾರೆ. ಟ್ವಿಟ್ಟರ್ ನಲ್ಲಿ ಬಹುತೇಕರು ಜೆಂಟ್ಲ್ ಮೆನ್, ನೀವು ಜನರ ಆಯ್ಕೆ, ಅತ್ಯುತ್ತಮ ನಾಯಕ ಎಂದೆಲ್ಲ ಕಮೆಂಟ್ ಮಾಡಿದ್ದಾರೆ.