ಚಾಮರಾಜನಗರ: ರಾಹುಲ್ ಗಾಂಧಿ ಐರನ್ ಲೆಗ್, ಬಿಜೆಪಿಗೆ ಇದರಿಂದ ಲಾಭ ಎಂಬ ಬಿಜೆಪಿಗರ ವ್ಯಂಗ್ಯಕ್ಕೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಹುಲ್ ಗಾಂಧಿ ಕಬ್ಬಿಣದ ಸೂಜಿ ಇದ್ದಂತೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದಾರೆ, ಬಿಜೆಪಿಗರು ಕತ್ತರಿ ಇದ್ದಂತೆ ಎಲ್ಲರನ್ನು ಇಬ್ಭಾಗ ಮಾಡುತ್ತಿದ್ದಾರೆ, ನಾವು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.
ಇದೇ 30 ರಿಂದ ರಾಜ್ಯದಲ್ಲಿ ಆರಂಭಗೊಳ್ಳುವ ಭಾರತ್ ಜೋಡೋ ಯಾತ್ರೆಯ ಮಾರ್ಗವನ್ನು ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹರಿಪ್ರಸಾದ್ ಪರಿಶೀಲನೆ ನಡೆಸಿದರು. ಯಾತ್ರೆ ಆರಂಭಗೊಳ್ಳುವ ಗುಂಡ್ಲುಪೇಟೆಯ ಅಂಬೇಡ್ಕರ್ ಭವನ ರಸ್ತೆ, ನಂಜನಗೂಡು ರಸ್ತೆ ಮತ್ತು ಬದನವಾಳು ಖಾದಿ ಕೇಂದ್ರಕ್ಕೆ ಕೈಪಡೆ ನಾಯಕರುಗಳು ಭೇಟಿ ನೀಡಿ ಭಾರತ್ ಜೋಡೋ ಯಾತ್ರೆಗಾಗಿ ಸಜ್ಜುಗೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ರಾಹುಲ್ ಗಾಂಧಿ ಆಪ್ತ ಸಹಾಯಕರ ತಂಡವೂ ಭೇಟಿಕೊಟ್ಟು ಮಾರ್ಗ ಪರಿಶೀಲನೆ ನಡೆಸಿದ್ದು ಕೈಪಡೆ ನಾಯಕರು ನಡೆಸುತ್ತಿರುವ 4 ಸುತ್ತಿನ ಪರಿಶೀಲನೆ ಇದಾಗಿದೆ. ಇದನ್ನೂ ಓದಿ: ಪಾಕ್ ಆರ್ಥಿಕ ಬಿಕ್ಕಟ್ಟು – 4 ವರ್ಷದಲ್ಲಿ ಐವರು ಹಣಕಾಸು ಸಚಿವರ ರಾಜೀನಾಮೆ
ರಾಗಾ ಸೂಜಿ-ಬಿಜೆಪಿ ಕತ್ತರಿ
ಮಾರ್ಗ ಪರಿಶೀಲನೆ ಬಳಿಕ ಮಾಧ್ಯಮವರೊಟ್ಟಿಗೆ ಮಾತನಾಡಿದ ಡಿಕೆ. ಶಿವಕುಮಾರ್ ಅವರು, ತಮಿಳುನಾಡಿನ ಗೂಡ್ಲೂರಿನಿಂದ ಕರ್ನಾಟಕ ಬರಲಿರುವ ರಾಹುಲ್ ಗಾಂಧಿ ಗುಂಡ್ಲುಪೇಟೆಯಲ್ಲಿ 9 ಗಂಟೆಗೆ ಸಾರ್ವಜನಿಕ ಸಭೆ ನಡೆಸಿ ಪಾದಯಾತ್ರೆ ನಡೆಸಲಿದ್ದಾರೆ. ರಾಜ್ಯದ ಎಲ್ಲಾ ನಾಯಕರುಗಳು ಅಂದು ರಾಗಾ ಜೊತೆ ಹೆಜ್ಜೆ ಹಾಕಲಿದ್ದಾರೆ. ಆಕ್ಸಿಜನ್ ದುರಂತದ ಸಂತ್ರಸ್ತರೊಟ್ಟಿಗೆ ಸಂವಾದ ನಡೆಸಲು ಯೋಜಿಸಲಾಗುತ್ತಿದೆ. ಜನರು ಪಾದಯಾತ್ರೆ ನಡೆಸಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.
ರಾಹುಲ್ ಗಾಂಧಿ ಐರನ್ ಲೆಗ್, ಬಿಜೆಪಿಗೆ ಇದರಿಂದ ಲಾಭ ಎಂಬ ಬಿಜೆಪಿಗರ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಕಬ್ಬಿಣದ ಸೂಜಿ ಇದ್ದಂತೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದಾರೆ, ಬಿಜೆಪಿಗರು ಕತ್ತರಿ ಇದ್ದಂತೆ ಎಲ್ಲರನ್ನು ಇಬ್ಭಾಗ ಮಾಡುತ್ತಿದ್ದಾರೆ, ನಾವು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ವಿಧವೆಯ ಹಿಂದೆ ಬಿದ್ದು ಮಸಣ ಸೇರಿದ ವಿಚ್ಚೇದಿತ – ಅವಳು ನನ್ನ ಮಾತು ಕೇಳ್ತಿಲ್ಲ ಅಂತ ಆತ್ಮಹತ್ಯೆಗೆ ಶರಣಾದ