ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರು ಒಂದು ದೈತ್ಯ ಬಂಡೆ, ಆ ಬಂಡೆಯ ವಿರುದ್ಧ ಹೋಗ್ತಾರಲ್ಲ, ಇದು ಚೈಲ್ಡಿಶ್, ರಾಹುಲ್ ಗಾಂಧಿ (Rahul Gandhi) ಫನ್ನಿಬಾಯ್ ಎಂದು ಶಾಸಕ ಎಂಪಿ ರೇಣುಕಾಚಾರ್ಯ (Renukacharya) ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ (Davangere) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ್ ಜೋಡೋ (Bharat Jodo Yatra) ಅಲ್ಲ ಭಾರತ ತೋಡೋ ಯಾತ್ರೆ. ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಒಂದು ದೈತ್ಯ ಬಂಡೆ, ಆ ಬಂಡೆಯ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್, ರಾಹುಲ್ ಗಾಂಧಿ ಫನ್ನಿಬಾಯ್ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ; ತ್ರಿಪಾಠಿ ನಾಮಪತ್ರ ತಿರಸ್ಕೃತ – ಖರ್ಗೆ, ಶಶಿ ತರೂರ್ ನಡುವೆ ಫೈಟ್
ಕನ್ಯಾಕುಮಾರಿಯಿಂದ (Kanyakumari) ಕಾಶ್ಮೀರದವರೆಗೂ (Kashmir) ಜನರು ಗೋ ಬ್ಯಾಕ್ ಎಂದು ಜನ ಓಡುಸುತ್ತಾರೆ, ರಾಹುಲ್ ಗಾಂಧಿಗೆ ರಾಜಕೀಯ ಪ್ರಬುದ್ಧತೆ ಇಲ್ಲ, ದೇಶವನ್ನು ವೋಟಿಗಾಗಿ ಸ್ವಾರ್ಥಕ್ಕಾಗಿ ಛಿದ್ರ ಮಾಡಿದವರು. ರಾಜಸ್ಥಾನದಲ್ಲಿ (Rajasthan) ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾಗಲು ಯಾರು ಸಿದ್ಧರಿಲ್ಲ, ರಾಹುಲ್ ಗಾಂಧಿ ಏನಾದರೂ ಅಧ್ಯಕ್ಷರಾದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಗಾಂಧೀಜಿಯವರು ಇದ್ದಿದ್ದ ಕಾಂಗ್ರೆಸ್ ಅದು ದೇಶ ಭಕ್ತಿ ಕಾಂಗ್ರೆಸ್, ಈಗ ನಕಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿದೆ. ಭಾರತ್ ಜೋಡೋ ಯಾತ್ರೆ ಐಷಾರಾಮಿ ಯಾತ್ರೆಯಾಗಿದೆ, ಅದಕ್ಕೆ ದಿನಕ್ಕೆ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿದ್ದಾರೆ, ಕೋವಿಡ್ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸತತ 6ನೇ ಬಾರಿಗೆ ದೇಶದ ಸ್ವಚ್ಛ ನಗರ ಕಿರೀಟ ಮುಡಿಗೇರಿಸಿಕೊಂಡ ಇಂದೋರ್
ಸಿದ್ದರಾಮೋತ್ಸವದಲ್ಲಿ ಡಿಕೆಶಿ, ಸಿದ್ದರಾಮಯ್ಯ (Siddaramaiah) ದೂರ ಆಗಿರುವ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮೋತ್ಸವದಲ್ಲಿ ಡಿಕೆಶಿ (D.K.Shivakumar), ಸಿದ್ದರಾಮಯ್ಯ ಬಲವಂತದಿಂದ ಅಪ್ಪುಗೆ ಮಾಡಿದರು. ಬೆಂಗಳೂರಿಗೆ ಹೋದ ನಂತರ ನಾನೊಂದು ತೀರಾ ನೀನೊಂದು ತೀರಾ ಎಂಬಂತೆ ಆಗಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಜನರು ಬರುತ್ತಿಲ್ಲ. ಪೇಮೆಂಟ್ ಕೊಟ್ಟು ಕರೆತರುತ್ತಿದ್ದಾರೆ. ಗೋ ಬ್ಯಾಕ್ ರಾಹುಲ್ ಗಾಂಧಿ ಎಂದು ಜನರು ಹೇಳುತ್ತಿದ್ದಾರೆ, 2023ಕ್ಕೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಸೂರ್ಯ ಚಂದ್ರರೂ ಇರುವುದು ಎಷ್ಟು ಸತ್ಯವೋ, ನಾವು ಅಧಿಕಾರಿಕ್ಕೆ ಬರುವುದು ಅಷ್ಟೇ ಸತ್ಯ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಲು ಯಾರು ಮುಂದೆ ಬರುತ್ತಿಲ್ಲ. ಆದ್ದರಿಂದ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಖರ್ಗೆಯವರ ಮೇಲೆ ಅಪಾರವಾದ ಗೌರವ ಇದೆ, ಈ ವಿಚಾರದಲ್ಲಿ ಅವರನ್ನು ಬಲಿ ಪಶು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಇದೇ ವೇಳೆ ಡಿಕೆಶಿ ಕಣ್ಣಿನಲ್ಲಿ ಕಣ್ಣೀರು ಬರುತ್ತದೆ ಎಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಕೊಟ್ಟಂತೆ, ಇನ್ನು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ದಿವಂಗತ ಮಹಾದೇವ ಪ್ರಸಾದ್‍ರವರ ಪತ್ನಿ ಸ್ಪರ್ಧೆ ಮಾಡಿದಾಗ, ಅವರಿಗೆ ಕಣ್ಣೀರು ಹಾಕು, ಕಣ್ಣೀರು ಹಾಕು ಅನುಕಂಪ ಬರುತ್ತದೆ ಎಂದು ಪಕ್ಕದಲ್ಲಿ ಕುಳಿತು ಡಿ.ಕೆ.ಶಿವಕುಮಾರ್ ಅವರು ಒತ್ತಾಯಿಸಿದ್ದರು. ಅಂದು ಡಿಕೆಶಿ ಆ ಹೆಣ್ಣು ಮಗಳಿಗೆ ಕಣ್ಣೀರು ಹಾಕಿಸಿದರು. ಡಿಕೆಶಿ ಮೊಸಳೆ ಕಣ್ಣೀರು ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.