DistrictsKarnatakaLatestLeading NewsMain PostVijayapura

ರಾಹುಲ್ ಗಾಂಧಿ ವಿದೇಶಿ ತಳಿ, ಜಾರಕಿಹೊಳಿಯನ್ನು ಉಚ್ಛಾಟಿಸಿ: ಯತ್ನಾಳ್

ವಿಜಯಪುರ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ವಿದೇಶಿ ತಳಿ. ಅವರು ವಿದೇಶದಲ್ಲಿ ತಯಾರಾದ ವಸ್ತು. ರಾಹುಲ್ ಖಂಡಿತವಾಗಿಯೂ ಭಾರತೀಯನಲ್ಲ ಎಂದು ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವ್ಯಂಗ್ಯವಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ರಾಹುಲ್ ಗಾಂಧಿ ಅವರು ಭಾರತೀಯನಲ್ಲ. ಅವರು ಹಿಂದೂ ಧರ್ಮಕ್ಕೂ ಸೇರಿಲ್ಲ. ಅದೊಂದು ಕಂಪ್ಲೀಟ್ ಆಗಿ ಬೇರೆಯೇ ತಳಿಯಾಗಿದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಹಿಂದೂ (Hindu) ಎಂಬ ಪದ ಅಶ್ಲೀಲ ಎಂದು ಹೇಳಿಕೆ ನೀಡಿದ್ದ ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ವಿರುದ್ಧ ಗುಡುಗಿದ ಯತ್ನಾಳ್, ಸಾವಿರಾರು ವರ್ಷದ ಸನಾತನ ಧರ್ಮ ಹಿಂದೂ ಧರ್ಮ ಆಗಿದೆ. ಜಾರಕಿಹೊಳಿ ಮಾತ್ರವಲ್ಲದೇ ರಾಹುಲ್, ದಿಗ್ವಿಜಯ ಸಿಂಗ್, ಸಿದ್ದರಾಮಯ್ಯ ಕೂಡಾ ಇದೇ ರೀತಿ ಮಾತನಾಡಿದ್ದಾರೆ. ಇವರೆಲ್ಲರೂ ಮುಸ್ಲಿಂ ಪರ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

ಇಂತಹ ಕೀಳುಮಟ್ಟದ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿಗೆ ನಾಚಿಕೆ ಆಗ್ಬೇಕು. ಯಾರೋ ಬರೆದಿದ್ದನ್ನು ಹೇಳಿರುವುದು ಖಂಡನೀಯ. ಅವರು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಶಾಸಕ ಜಾರಕಿಹೊಳಿಯನ್ನು ತಕ್ಷಣವೇ ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಬೇಕು ಎಂದು ಕಿಡಿ ಕಾರಿದರು.

ಜಾರಕಿಹೊಳಿ ದೊಡ್ಡ ಸಿದ್ಧಾಂತ ಶಿಖಾಮಣಿಯಾ? ಸುಮ್ಮನೆ ಬಾಯಿ ಮುಚ್ಕೊಂಡು ಕುಳಿತುಕೊಂಡರೆ ಒಳ್ಳೆಯದು. ಚುನಾವಣೆಯಲ್ಲಿ ನಿಜವಾದ ಹಿಂದೂ ಧರ್ಮದವರು ಏನು ಅನ್ನೊದು ತೋರಿಸುತ್ತಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮ, ಜಾತಿ ಬಿಟ್ಟರೆ ಬಿಜೆಪಿ- ಕಾಂಗ್ರೆಸ್‌ಗೆ ಬೇರೆ ವಿಷಯ ಇಲ್ಲ: ಕುಮಾರಸ್ವಾಮಿ

Live Tv

Leave a Reply

Your email address will not be published. Required fields are marked *

Back to top button