Latest

ಧರ್ಮ, ಜಾತಿ ಬಿಟ್ಟರೆ ಬಿಜೆಪಿ- ಕಾಂಗ್ರೆಸ್‌ಗೆ ಬೇರೆ ವಿಷಯ ಇಲ್ಲ: ಕುಮಾರಸ್ವಾಮಿ

ಬೆಂಗಳೂರು : ಧರ್ಮ, ಜಾತಿ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜನರ ಮನಸ್ಸನ್ನು ಕೆಡಿಸುತ್ತಿವೆ. ಆ ಎರಡೂ ಪಕ್ಷಗಳಿಗೆ ಅಭಿವೃದ್ಧಿ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ (HD Kumaraswamy) ಟೀಕಾ ಪ್ರಹಾರ ಮಾಡಿದರು.

ಹಿಂದೂ ಪದ ಅಶ್ಲೀಲ ಎಂದು ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ಅವರು ನೀಡಿರುವ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಪಕ್ಷಗಳು ಸೂಕ್ಷ್ಮ ವಿಚಾರ ಇಟ್ಟುಕೊಂಡು ಚುನಾವಣಾ ರಾಜಕೀಯ ಮಾಡುತ್ತಿವೆ. ಇದು ಸರಿಯಲ್ಲ ಎಂದರು. ಇದನ್ನೂ ಓದಿ: `ಹಿಂದೂ’ ಅಶ್ಲೀಲ ಪದ ಅನ್ನೋದು ಯಾವ ಪುಸ್ತಕದಲ್ಲಿದೆ ನನಗಂತೂ ಗೊತ್ತಿಲ್ಲ: ಡಿಕೆಶಿ

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಎಲ್ಲಾ ಅರಿವಿದ್ದರೂ ಜನರ ಸಮಸ್ಯೆ ಕೇಳಲು ಯಾರೂ ತಯಾರಿಲ್ಲ. ನಾನು ಹೊಡೆದಂಗೆ ಮಾಡ್ತೀನಿ, ನೀನು ಅತ್ತಂಗೆ ಮಾಡು ಎನ್ನುವಂಥ ನೀತಿ ಅನುಸರಿಸುತ್ತಿವೆ. ಇವರ ಯೋಗ್ಯತೆ ಏನು ಎನ್ನುವುದು ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುದ್ದಿಗೋಷ್ಠಿ ಕರೆದು ಸಿದ್ದರಾಮಯ್ಯ ವಿರುದ್ಧ ಅಶ್ಲೀಲ ಮಾತು

Live Tv

Leave a Reply

Your email address will not be published. Required fields are marked *

Back to top button