ವಿಜಯಪುರ: ಪ್ರಧಾನಿ ಮೋದಿ (Narendra Modi) ಅವರ ಪಕ್ಷವು ಸಾರ್ವಜನಿಕರ ಹಣವನ್ನು ಲೂಟಿ ಮಾಡಿದೆ. ಪ್ರತಿಯಾಗಿ ಜನರಿಗೆ ಖಾಲಿ ಚೊಂಬು ಕೊಟ್ಟಿದೆ. ಬಿಜೆಪಿ ‘ಭಾರತೀಯ ಚೊಂಬು ಪಾರ್ಟಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಲೇವಡಿ ಮಾಡಿದ್ದಾರೆ.
ಕರ್ನಾಟಕದ ವಿಜಯಪುರದಲ್ಲಿ (Vijayapura) ಶುಕ್ರವಾರ ನಡೆಸಿದ ರ‍್ಯಾಲಿಯಲ್ಲಿ ಖಾಲಿ ಚೊಂಬು ಹಿಡಿದಿರುವ ಫೋಟೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಬಿಜೆಪಿಯವರು ಸಾರ್ವಜನಿಕರ ಹಣವನ್ನು ಹೇರಳವಾಗಿ ಲೂಟಿ ಮಾಡಿದರು. ಪ್ರತಿಯಾಗಿ ಜನರಿಗೆ ಖಾಲಿ ಚೊಂಬು ನೀಡಿದರು. ಇದು ಮೋದಿಯವರ ಭಾರತೀಯ ಚೊಂಬು ಪಕ್ಷ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರ ಕೋಟ್ಯಧಿಪತಿಗಳಿಗೆ ಕೊಟ್ಟ ಹಣವನ್ನು ರೈತರಿಗೆ ಹಂಚಲು ಯೋಚಿಸಿದ್ದೇವೆ: ರಾಗಾ
भर-भर कर जनता का पैसा लूटा और बदले में पकड़ा दिया बस खाली लोटा – ये है मोदी की भारतीय चोंबू पार्टी!
ಜನರ ಹಣ ಲೂಟಿ ಮಾಡಿ ಬದಲಿಗೆ ಅವರಿಗೆ ಖಾಲಿ ಚೊಂಬು ಕೊಟ್ಟಿದ್ದು – ಮೋದಿಯ ಭಾರತೀಯ ಚೊಂಬು ಪಾರ್ಟಿ. pic.twitter.com/8ZveG0j6lH
— Rahul Gandhi (@RahulGandhi) April 26, 2024
ರ‍್ಯಾಲಿಯಲ್ಲಿ ಮಾತನಾಡುವಾಗ, ನೀವು ಪ್ರಧಾನಿಯವರ ಭಾಷಣಗಳನ್ನು ಕೇಳಿದ್ದೀರಿ. ಅವರು ಭಯಗೊಂಡಿದ್ದಾರೆ. ಅವರು ವೇದಿಕೆಯಲ್ಲಿ ಕಣ್ಣೀರು ಹಾಕುವ ಸಾಧ್ಯತೆಯಿದೆ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಏನು ಮಾಡಲಿದೆ ಎಂದು ನಾನು ನಿಮಗೆ ಹೇಳುತ್ತೇನೆ. ನರೇಂದ್ರ ಮೋದಿಯವರ ಭಾರತೀಯ ಚೊಂಬು ಪಕ್ಷ ಖಾಲಿಯಾಗಿದೆ. ಕರ್ನಾಟಕ ಜಿಎಸ್‌ಟಿ ರೂಪದಲ್ಲಿ 100 ರೂ. ಕೊಟ್ಟರೆ, ಪ್ರತಿಯಾಗಿ ಕೇವಲ 13 ರೂಪಾಯಿಯನ್ನು ತೆರಿಗೆಯಾಗಿ ಪಡೆಯುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕಕ್ಕೆ ಬರ ಪರಿಹಾರಕ್ಕಾಗಿ ಸುಮಾರು 18,000 ಕೋಟಿ ರೂ. ಸಿಗಬೇಕಿತ್ತು. ಆದರೆ ಅದಕ್ಕೆ ‘ಚೊಂಬು’ ಸಿಕ್ಕಿದೆ. ಹಣಕಾಸು ಆಯೋಗವು 60,000 ಕೋಟಿ ರೂ. ನೀಡಲಿಲ್ಲ. ಚೊಂಬು ಮಾತ್ರ ನೀಡಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದ್ವೇಷದ ವಿರುದ್ಧ ಮತ ಹಾಕಿದ್ದೇನೆ: ನಟ ಪ್ರಕಾಶ್ ರೈ ವಿಡಿಯೋ ವೈರಲ್