ರಾಹುಲ್ ಗಾಂಧಿ ತಮ್ಮ ಪಕ್ಷಕ್ಕೆ ರಾಹು ಆಗಿದ್ದಾರೆ: ನಾಲಿಗೆ ಹರಿಬಿಟ್ಟ ಶಿವರಾಜ್ ಸಿಂಗ್ ಚೌಹಾಣ್

Public TV
1 Min Read
rahul gandhi Shivraj Singh Chouhan

ಭೋಪಾಲ್: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಗೆ (Rahul Gandhi) ದೇಶದ ಬಗ್ಗೆ ಅಥವಾ ದೇಶದ ನೀತಿಗಳ ಬಗ್ಗೆ ಏನೂ ತಿಳಿದಿಲ್ಲ. ಅವರು ತಮ್ಮ ಪಕ್ಷಕ್ಕೆ ರಾಹು (Rahu) ಆಗಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ (Madhya Pradesh CM) ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ರಾಹುಲ್ ಗಾಂಧಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

ಬುಧವಾರ ಭೋಪಾಲ್‌ನಲ್ಲಿ (Bhopal) ಮಾಧ್ಯಮದವರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಸಿಎಂ, ರಾಹುಲ್ ಗಾಂಧಿ ಎಂತಹ ನಾಯಕನೆಂದರೆ, ಅವರಿಗೆ ರಾಷ್ಟ್ರೀಯ ನೀತಿಗಳ ಬಗ್ಗೆ ಜ್ಞಾನವೇ ಇಲ್ಲ. ರಾಹುಲ್ ಅವರೇ, ದೇಶ ಸಂವಿಧಾನದ ಮೇಲೆ ನಡೆಯುತ್ತಿದೆ, ಮಾತಿನ ಮೇಲೆ ಅಲ್ಲ ಎಂದು ಕಿಡಿಕಾರಿದ್ದಾರೆ.

RAHUL GANDI

ದೇಶದ ಜನರಿಗೆ ಕಾಂಗ್ರೆಸ್‌ನ ಸಮಸ್ಯೆ ಏನು ಎಂಬುದು ತಿಳಿದಿದೆ. ಕಾಂಗ್ರೆಸ್‌ನ ದೊಡ್ಡ ಸಮಸ್ಯೆಯೇ ರಾಹುಲ್ ಗಾಂಧಿ. ರಾಹುಲ್ ಕಾಂಗ್ರೆಸ್‌ಗೆ ರಾಹು ಆಗಿದ್ದಾರೆ. ಹೀಗಾಗಿಯೇ ಭಾರತದಲ್ಲಿ ಇದೀಗ ಅಮೃತ ಕಾಲ ನಡೆಯುತ್ತಿದ್ದು, ಕಾಂಗ್ರೆಸ್‌ನಲ್ಲಿ ಮಾತ್ರ ರಾಹು ಕಾಲ ನಡೆಯುತ್ತಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ಗೆ ಆತಂಕ- ಟಿಕೆಟ್ ಫೈನಲ್ ಮಾಡಲು ಪರದಾಟ

ಗಾಂಧಿ, ನೆಹರೂ ಕುಟುಂಬದ ಗುಲಾಮ ನಾಯಕರು ರಾಹುಲ್ ಗಾಂಧಿ ಅವರನ್ನು ಬಲವಂತವಾಗಿ ರಾಷ್ಟ್ರೀಯ ನಾಯಕನನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಆದರೆ ವಾಸ್ತವವೆಂದರೆ ರಾಹುಲ್ ಗಾಂಧಿ ಅತ್ಯಂತ ವಿಫಲ, ದುರ್ಬಲ, ಬೇಜವಾಬ್ದಾರಿ, ಅಸಡ್ಡೆ ಮತ್ತು ಸೊಕ್ಕಿನ ಮನುಷ್ಯ ಎಂದು ಕಟುವಾಗಿ ಟೀಕಿಸಿದ್ದಾರೆ.

shivraj singh chouhan

2013ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಹೊರಡಿಸಿದ ಚುನಾವಣಾ ಅನರ್ಹತೆಯ ಕಾನೂನಿನ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ್ದನ್ನು ಉಲ್ಲೇಖಿಸಿದ ಅವರು, ಇದು ರಾಹುಲ್ ಗಾಂಧಿಯವರ ಅಹಂಕಾರದ ಕೃತ್ಯ ಎಂದಿದ್ದಾರೆ. ದುರಹಂಕಾರದಲ್ಲಿ ರಾಹುಲ್ ಗಾಂಧಿ ವಿವಿಧ ವರ್ಗಗಳು ಮತ್ತು ಜಾತಿಗಳನ್ನು ಅವಮಾನಿಸುತ್ತಾರೆ. ಹಿಂದುಳಿದ ವರ್ಗಗಳು ತನಗೆ ಸವಾಲು ಹಾಕಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಗೆ ತಿಳಿದಿದೆ. ಇದು ದುರಹಂಕಾರವಲ್ಲದೇ ಮತ್ತೇನು ಎಂಬುದನ್ನು ರಾಹುಲ್ ಗಾಂಧಿಯೇ ಹೇಳಬೇಕು ಎಂದು ಚೌಹಾಣ್ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ಫೈಟ್‍ನ ಲಾಭ ಪಡೆಯಲಿದೆಯೇ ಬಿಜೆಪಿ?

Share This Article