ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ರಾಜ್ಯಗಳ, ದೇಶದ ಚುನಾವಣೆಯಲ್ಲಿ ಐರನ್ ಲೆಗ್ ತರಹ ಸೋಲು ಕಂಡಿದ್ದಾರೆ. ರಾಹುಲ್ ಕಾಲು ಇಟ್ಟ ಕಡೆ ಸೋಲಾಗುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಲೇವಡಿ ಮಾಡಿದ್ದಾರೆ.
ಬಿಹಾರ ಚುನಾವಣೆ (Bihar Elections) ಎಕ್ಸಿಟ್ ಪೋಲ್ (Exit Poll) ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇಶದ ಪ್ರತಿಷ್ಠಿತ ಚುನಾವಣೆ ಬಿಹಾರ ಚುನಾವಣೆ. ಮತದಾರರ ಆಶಯ ಮತ ಪೆಟ್ಟಿಗೆಯಲ್ಲಿ ಸೀಲ್ ಆಗಿದೆ. ಮೊದಲ ಬಾರಿಗೆ ನಕ್ಸಲ್ ಇರೋ ಕ್ಷೇತ್ರದಲ್ಲೂ ಶಾಂತಿಯುತ ಮತದಾನ ಆಗಿದೆ. ಅಮಿತ್ ಶಾ ಗೃಹಮಂತ್ರಿ ಆದ ಮೇಲೆ ನಕ್ಸಲರನ್ನ ಮಟ್ಟ ಹಾಕೋ ಕೆಲಸ ಮಾಡಿದ್ದಾರೆ. ಎಕ್ಸಿಟ್ ಪೋಲ್‌ನಲ್ಲಿ 12ಕ್ಕೂ ಹೆಚ್ಚು ರಿಪೋರ್ಟ್‌ನಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಘಟ್ ಬಂಧನ್ ಒಂದರಲ್ಲೂ ಮುಂದೆ ಬಂದಿಲ್ಲ. 14ರಂದು ರಾಹುಲ್ ಗಾಂಧಿ ಫಸ್ಟ್ ರಿಯಾಕ್ಷನ್ ವೋಟ್ ಚೋರಿ ಆಗಿದೆ. ಎರಡನೇ ರಿಯಾಕ್ಷನ್ ವೋಟಿಂಗ್ ಮಿಷನ್ ಸರಿಯಿಲ್ಲ ಎಂದು ಹೇಳುತ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: 3,500 ರೂ. ಬೇಕೇ ಬೇಕು – ಮುಧೋಳದಲ್ಲಿ ಉಗ್ರ ಸ್ವರೂಪ ಪಡೆದ ರೈತರ ಹೋರಾಟ
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸುತ್ತದೆ. ಕಾಂಗ್ರೆಸ್ ದೇಶದಲ್ಲಿ ಕಾಣೆ ಆಗೋ ಪಾರ್ಟಿ ಆಗಲಿದೆ. ರಾಹುಲ್ ಗಾಂಧಿ ನಾಯಕತ್ವ ಬಂದ ಮೇಲೆ ಸೋಲಿನ ಸೆಂಚುರಿ ಆಗಿದೆ. ಈಗ ವಿದೇಶ ಪ್ರವಾಸಕ್ಕೆ ಹೋಗುತ್ತಾರಂತೆ. ರಾಹುಲ್ ಗಾಂಧಿ ಜವಾಬ್ದಾರಿ ಇರೋ ವಿಪಕ್ಷ ನಾಯಕ ಅಲ್ಲ. ಸಂಸತ್‌ನಲ್ಲಿ ಅವರ ಹಾವ-ಭಾವ, ಪಾಕಿಸ್ತಾನದ ಬಗ್ಗೆ ಸಾಫ್ಟ್ ಆಗಿರೋದು ನೋಡಿದ್ದೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ಕ್ಯಾನಿಂಗ್‌ಗೆ ಬಂದ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ – ಖಾಸಗಿ ಅಂಗ ಮುಟ್ಟಿ ಕೌರ್ಯ ಮೆರೆದಿದ್ದ ರೆಡಿಯಾಲಜಿಸ್ಟ್ ವಿರುದ್ಧ FIR
ರಿಯಲ್ ಪೋಲ್‌ನಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ. ಎಕ್ಸಿಟ್ ಪೋಲ್ ಟ್ರೈಲರ್ ಇದ್ದ ಹಾಗೆ. ನವೆಂಬರ್ 14ರಂದು ಎನ್‌ಡಿಎ ಗೆಲ್ಲುತ್ತೆ. ಕಾಂಗ್ರೆಸ್ ದೇಶದಲ್ಲಿ ಕಾಣೆ ಆಗೋ ಪಾರ್ಟಿ ಆಗುತ್ತದೆ ಎಂದರು. ಇದನ್ನೂ ಓದಿ: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಮಾಯಗಾತಿ – ಲಾಡ್ಜ್‌ಗೆ ಹೋಗಿ ಹಣ, ಚಿನ್ನ ಕಳೆದುಕೊಂಡ ಯುವಕ!

