ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ

Public TV
1 Min Read
RAHUL GANDHI

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೊರೊನಾ ಲಸಿಕೆ ವಿತರಣೆಯ ದಾಖಲೆ ಕುರಿತಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ.

Vaccination ಹ್ಯಾಶ್‍ ಟ್ಯಾಗ್ ಬಳಸಿ ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಕಾರ್ಯಕ್ರಮ ಮುಗಿದಿದೆ ಎಂದು ಬರೆದಿದ್ದಾರೆ. ಚುಚ್ಚುಮದ್ದಿನ ಹಂಚಿಕೆಯ ಕುಸಿತವನ್ನು ತೋರಿಸಲು ಕೋವಿಡ್ ವೆಬ್‍ಸೈಟ್‍ನ ಮಾಹಿತಿಯ ಪ್ರಕಾರ ಕಳೆದ 10 ದಿನಗಳಲ್ಲಿ ವ್ಯಾಕ್ಸಿನೇಷನ್ ನೀಡಿರುವ ಗ್ರಾಫನ್ನು ರಾಹುಲ್ ಗಾಂಧಿ ಟ್ವೀಟ್‍ನಲ್ಲಿ ಹಂಚಿಕೊಂಡಿದ್ದಾರೆ.

Vaccine 1 1 medium

ದೇಶದಲ್ಲಿ ಹೆಚ್ಚು ಲಸಿಕೆಗಳು ನೀಡುವಂತಹ ದಾಖಲೆಯಾಗಲಿ. 2.1 ಕೋಟಿ ಲಸಿಕೆ ವಿತರಣೆಯಗುವುದನ್ನು ಹಲವು ದಿನಗಳವರೆಗೆ ಎದುರು ನೋಡುತ್ತಿದ್ದೇನೆ. ಈ ವೇಗ ನಮ್ಮ ದೇಶಕ್ಕೆ ಬೇಕಾಗಿದೆ ಎಂದು ಈ ಹಿಂದೆ ಟ್ವಿಟ್ಟರ್‌ನಲ್ಲಿ ಹೇಳಿದ್ದರು. ಇದನ್ನೂ ಓದಿ:  ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ (Narendra Modi Brithday) ಹಿನ್ನೆಲೆಯಲ್ಲಿ ಶುಕ್ರವಾರ ದೇಶಾದ್ಯಂತ ಕೋವಿಡ್ 19 ಲಸಿಕಾ ಬೃಹತ್ ಮೇಳವನ್ನು ಆಯೋಜಿಸಲಾಗಿತ್ತು.  ಒಂದೇ ದಿನ 2 ಕೋಟಿ ಡೋಸ್ ಗಡಿ ದಾಟುವ ಮೂಲಕ ದೇಶ ಕೋವಿಡ್ 19 ಲಸಿಕೆ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ದೇಶದಲ್ಲಿ ಒಟ್ಟಾರೆ 78.68 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ, ಇಂದು 2 ಕೋಟಿಗೂ ಹೆಚ್ಚು ಡೋಸ್ ಕೊರೊನಾ ಲಸಿಕೆ ನೀಡುವ ಮೂಲಕ ಭಾರತದ ಕೋವಿಡ್ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಖುಷಿ ಹಂಚಿಕೊಂಡಿದೆ.

ಭಾರತದಲ್ಲಿ ಜನವರಿಯಿಂದ ಕೋವಿಡ್ 19 ಲಸಿಕಾ ಅಭಿಯಾನ (Covid19 Vaccination Campaign) ಶುರುವಾಗಿದ್ದರೂ ಕೆಲವು ಅಡಚಣೆಗಳ ಕಾರಣದಿಂದ ಸ್ವಲ್ಪ ದಿನ ತೊಡಕಾಗಿತ್ತು. ಆದರೆ ಈಗ ಅಭಿಯಾನ ವೇಗ ಪಡೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *